ಹೊಳಲ್ಕೆರೆ
ಹೊಳಲ್ಕೆರೆ ತಾಲ್ಲುಕು ಬಂಜಾರ ಸಮಾಜ ಮತ್ತು ತಾಲ್ಲುಕು ಸಂಘದ ವತಿಯಿಂದ ಸಂತ ಶ್ರೀ ಸೇವಾಲಾಲರ 280ನೇ ಜಯಂತೋತ್ಸವ ಹಾಗೂ ಜಿಲ್ಲಾ ಮಟ್ಟದ ಬಂಜಾರ ತೀಜ್ ಉತ್ಸವ ಫೆಬ್ರವರಿ 26ರ ಮಂಗಳವಾರ ಮದ್ಯಾಹ್ನ 3 ಗಂಟೆ ಹೊಳಲ್ಕೆರೆಯ ಡಾ. ಬಿ.ಆರ್.ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಏಪರ್ಡಿಸಲಾಗಿದೆ
ಬಂಜಾರ ಸಮಾಜದ ಮುಖಂಡರು ಪ್ರವಾಸಿ ಮಂದಿರದಲ್ಲಿ ಈ ಸಂಬಂಧ ಭಾನುವಾರ ಪೂರ್ವ ಸಿದ್ದತಾ ಸಭೆ ನಡೆಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಹಾಗೂ ಸಮಾಜದ ಎಲ್ಲಾ ಮುಖಂಡರ ಸಹಕಾರ ಪಡೆಯಲು ಸಭೆಯಲ್ಲಿ ಚರ್ಚಿಸಲಾಯಿತು
ಬಂಜಾರ ಸಮುದಾಯದ ಧಾರ್ಮಿಕ ಸದ್ಗುರು ಸಂತ ಶ್ರೀಸೇವಾಲಾಲ್ ರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಇದೇ ಸಂದರ್ಭದಲ್ಲಿ ಹೊಳಲ್ಕೆರೆ ತಾಲ್ಲುಕಿನಲ್ಲಿ ಸುಮಾರು ಮೂವತ್ತು ತಾಂಡಗಳಲ್ಲಿ ತೀಜ್ ಬಿತ್ತನೆ(ಗೋದಿಹಬ್ಬ)ವನ್ನು ಕಳೆದ 9 ದಿನಗಳಿಂದ ಹಂತ ಹಂತವಾಗಿ ಬೆಳೆಯುತ್ತಿದ್ದು ಧಾರ್ಮಿಕ ವಿಧಿ,ಆಚರಣೆಯ ಮೂಲಕವಾಗಿ ಬೆಳೆಸಲಾಗುತ್ತಿದ್ದು. ಅಂತಿಮವಾಗಿ ಮಂಗಳವಾರ ತೀಜ್ ಸಂಭ್ರವನ್ನು ಆಚರಿಸಲಾಗುವುದು ಸಂತ ಶ್ರೀ ಸೇವಾಲಾಲ್ ರ ಜಯಂತೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲೆ ಕುಡಿಚಿ ಶಾಸಕರಾದ ಪಿ.ರಾಜು ಅವರು ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮುಜರಾಯಿ ಸಚಿವರಾದ ಬಿ.ಟಿ.ಪರಮೇಶ್ವರ ನಾಯ್ಕ್ ರವರು ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ಸಂತ ಶ್ರೀ ಸೇವಾಲಾಲ್ ಕುರಿತು ಉಪನ್ಯಾಸವನ್ನು ಸಾಮಾಜಿಕ ಚಿಂತಕರು,ಪ್ರಸಿದ್ದ ಗಾಯಕರು ಆದ ಡಾ. ರಾಜಾನಾಯಕ್ ರವರು ನೆರವೇರಿಸಲಿದ್ದಾರೆ.ಶಾಸಕ ಎಂ.ಚಂದ್ರಪ್ಪ, ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ತಿಪ್ಪಾರೆಡ್ಡಿ, ಮಾಜಿ ಸಚಿವ ಹೆಚ್.ಆಂಜನೇಯ, ರುದ್ರಪ್ಪ ಲಮಾಣಿ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಹೀರಾನಾಯ್ಕ್,ಎ.ವಿ.ಉಮಾಪತಿ, ಪಿರಮೇಶ್, ಹನುಮಲಿ ಷಣ್ಮುಖಪ್ಪ, ಶ್ರೀಮತಿಲತಾಕುಮಾರ್ ಉಪಸ್ಥಿತರಿರುವರು, ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಜನಪರ ಹೋರಾಟಗಾರರಾದ ನರೇನಹಳ್ಳಿ ಅರುಣ್ ಕುಮಾರ್ ಅವರು ಮಾತನಾಡಲಿದ್ದು.ಶ್ರೀಮತಿ ಕೋಕಿಲಾಬಾಯಿ, ಶ್ರೀಮತಿ ವಸಂತಕುಮಾರಿ,ತಾಲ್ಲೂಕು ಬಣಜಾರ ಸಂಘದ ಅಧ್ಯಕ್ಷರಾದ ಬಸವರಾಜ್ ನಾಯ್ಕ,ಕೆ.ಆರ್.ಈಶ್ವರ್ ನಾಯ್ಕ.ಲೋಕೇಶ್‍ನಾಯಕ್,ಮಂಜುಳಾ ರೇಖಾನಂದ,ನರಸಿಂಹ ಖಾಟ್ರೋತ್.ದೇವೇಂದ್ರನಾಯಕ್ ಉಪಸ್ಥಿತರಿರುವವರು.
ಬಂಜಾರ ಸಾಂಸ್ಕೃತಿಕ ರ್ಯಾಲಿಗೆ ಚಾಲನೆ:
ಫೆ. 26ರ ಬೆಳಿಗ್ಗೆ 10-30ಕ್ಕೆ ಸಾಂಸ್ಕೃತಿಕ ರ್ಯಾಲಿ ಆರಂಭಗೊಳ್ಲಲಿದ್ದು. ರ್ಯಾಲಿಯನ್ನು ಮಾಜಿ ಸಚಿವರಾದ ಬಿ.ಶ್ರೀರಾಮಲು ಅವರು ಚಾಲನೆ ನೀಡುವರು. ಇದೇ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಸುಜಾತ ಧನಂಜಯ್ ನಾಯ್ಕ್ ವಹಿಸುವರು.
ಸೇವಾಲಾಲ್ ಭಾವ ಚಿತ್ರ ಅನಾವರಣವನ್ನು ಶಿವಮೊಗ್ಗ ಗ್ರಾಮಾಂತರ ಶಾಶಕ ಅಶೋಕ್‍ನಾಯ್ಕ್ ನೆರವೇರಿಸುವರು. ಸಮಾರಂಭದಲ್ಲಿ ತಹಶೀಲ್ದಾರ್ ಕೆ.ನಾಗರಾಜ್, ನಿವೃತ್ತ ವೈಧ್ಯಾಧಿಕಾರಿ ಡಾ.ರಂಗನಾಥ್, ಡಾ.ಮಂಜುನಾಥ್, ತೋಟಗಾರಿಕೆ ಇಲಾಖೆಯ ಅಧಿಕಾರಿ ಕುಮಾರ್ ನಾಯ್ಕ್, ಇಂಜಿನಿಯರ್ ಟೋಗ್ಯಾನಾಯ್ಕ್ ಸವಿತಾ ನರಸಿಂಹಕಾಟ್ರೋತ್, ಪುಟ್ಟಿಬಾಯಿ, ರಾಜೇಶ್ ಎಂ.ಮಂಜನಾಯ್ಕ್, ಜಯಸಿಂಹ ಕಾಟ್ರೋತ್, ಬಸವರಾಜ್ ನಾಯ್ಕ್, ಗೀತಾಬಾಯಿ ಗಣೇಶ್‍ನಾಯ್ಕ್, ವೆಂಕಟೇಶ್ ನಾಯ್ಕ್ ನಿರ್ಮಲ ಬಸವರಾಜ ನಾಯ್ಕ್, ವೆಂಕಟೇಶ್ ನಾಯ್ಕ್, ಡಿ.ವಿಜಯ್, ಹೇಮಂತನಾಯ್ಕ್ ಹಾಜರಿರುವರು.
ಕರ್ನಾಟಕ ಬಂಜಾರ ಜನ ಜಾಗೃತಿ ಸಮಿತಿಯ ರಾಷ್ಟ್ರೀಯ ಸಂಚಾಲಕರಾದ ಆರ್.ವಿಶ್ವಸಾಗರ್ ಮಾತನಾಡಿ ತೀಜ್ ಹಬ್ಬಕ್ಕೆ ಚಾರಿತ್ರಿಕ ಹಿನ್ನೆಲೆ ಇದ್ದು ಪರಿಸರದೊಂದಿಗೆ ಲಂಬಾಣಿಗಳ ಬದುಕು ಮೇಳೆಯಿಸಿಕೊಂಡಿದೆ. ಉತ್ತರ ಭಾರತದಿಂದ ಬಂದವರಾದ ಕಾರಣ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಹೊಂದಿರವ ಇವರು ತೀಜ್ ಹಬ್ಬವನ್ನು ಸಾಂಸ್ಕತಿಕ ಹಬ್ಬವನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.ಸಭೆಯಲ್ಲಿ ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ ಕುಮಾರ್, ಧನಂಜಯ್ ನಾಯ್ಕ್, ಯೋಗಮೂರ್ತಿ ನಾಯ್ಕ್, ಪರಮೇಶ್ವರ್ ನಾಯ್ಕ್, ರಾಜಾ ನಾಯ್ಕ್, ಅರುಣನಾಯ್ಕ್, ಸುಧೀರ್ ಉಪಸ್ಥಿತರಿದ್ದರು.