ಶ್ರೀಕ್ಷೇತ್ರ ಮೈಲಾರಕ್ಕೆ ಪಾದಯಾತ್ರೆ

ದಾವಣಗೆರೆ:

       ಶ್ರೀಕ್ಷೇತ್ರ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಗರದಿಂದ ನಾಳೆ (ಫೆ.18ರಂದು) ಪಾದಯಾತ್ರೆ ಮೂಲಕ ಭಕ್ತರು ತೆರಳಲಿದ್ದಾರೆಂದು ಶ್ರೀಮೈಲಾರಲಿಂಗೇಶ್ವರ ಟ್ರಸ್ಟ್‍ನ ಮಾಜಿ ಅಧ್ಯಕ್ಷ ಬಳ್ಳಾರಿ ಷಣ್ಮುಖಪ್ಪ ತಿಳಿಸಿದರು.ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 2ಗಂಟೆಗೆ ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಶಿಬಾರ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ದೇವರಗುಡ್ಡ ಮಾರ್ಗವಾಗಿ ಶ್ರೀಕ್ಷೇತ್ರ ಮೈಲಾರಕ್ಕೆ ಪಾದಯಾತ್ರೆಯ ಮೂಲಕ ಸುಮಾರು 500 ಜನ ಭಕ್ತರು ತೆರಳಲಿದ್ದಾರೆಂದು ಹೆಳಿದರು.

       ಪಾದಯಾತ್ರಾರ್ಥಿಗಳಿಗೆ ಫೆ. 19 ರಂದು ದೇವರಗುಡ್ಡದ ಸಮೀಪ ತೋಟದ ಮನೆ ಹತ್ತಿರ ಉಪಹಾರ ಹಾಗೂ ಮಧ್ಯಾಹ್ನ 12-30 ಕ್ಕೆ ಊಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ. ಫೆ.20 ರಂದು ಮೈಲಾರಹೊಳೆ ಸಮೀಪದಲ್ಲಿ ಉಪಹಾರದ ವ್ಯವಸ್ಥೆ ಇರುತ್ತದೆ. 22ರಂದು ಮೈಲಾರ ಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವ, ಹಾಗೂ ಮೈಲಾರ ಡೆಂಕನಮರಡಿಯಲ್ಲಿ ಬೆಳಗ್ಗೆ 10 ಕ್ಕೆ ದೋಣಿ ತುಂಬಿಸುವಕಾರ್ಯಕ್ರಮ ಹಾಗೂ ಜಾತ್ರೆಗೆ ಬಂದಂತ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಭರತ ಹುಣ್ಣಿಮೆ:

     ಫೆ.19ರಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಭರತಹುಣ್ಣಿಮೆ ಪ್ರಯುಕ್ತ ಸ್ವಾಮಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗುವುದು ಫೆ.20 ರಂದು ಶ್ರೀ ಮಾಲತೇಶಸ್ವಾಮಿ ದೇವರಗುಡ್ಡದ ಹರವು ಮಾಡಿ ದೋಣಿ ತುಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.21 ಹಾಗೂ 22ರಂದು ಬೆಳಗ್ಗೆ ಅಭಿಷೇಕ ಸಂಜೆ 5.30ಕ್ಕೆ ಶ್ರೀಕ್ಷೇತ್ರ ಮೈಲಾರದಲ್ಲಿ ಕಾರ್ಣಿಕೋತ್ಸವ, ಫೆ.23 ರಂದು ಶ್ರೀ ಮೈಲಾರಲಿಂಗೇಶ್ವರ ದೇವರ ಪರವು, 24 ರಂದು ಭಂಡಾರಪೂಜೆ, 25 ರಂದು ರಾತ್ರಿ 8ಕ್ಕೆ ಗಡಿಪರವು ನಂತರ ಸ್ವಾಮಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಗೋಪಾಲರಾವ್ ಸಾವಂತ್, ಹೆಚ್.ಜೆ.ವೀರಪ್ಪ, ಮಹಾಂತೇಶ್, ಟೈಟಾನಿಕ್ ಮಹಾಂತೇಶ್, ಗುಡ್ಡಪ್ಪ, ನಿಂಗರಾಜ್, ಸಿದ್ದಪ್ಪ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link