ಪಟ್ಟಣದ ತುಂಬ ಹುಲಿ ವೇಷದಾರಿಗಳು ಭರ್ಜರಿ ನೃತ್ಯ

ಕೂಡ್ಲಿಗಿ:

     ಮೋಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರ ಪಟ್ಟಣದ ತುಂಬ ಹುಲಿ ವೇಷದಾರಿಗಳು ಭರ್ಜರಿ ನೃತ್ಯ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

    ಶುಕ್ರವಾರ ಪಟ್ಟಣದಲ್ಲಿ ವಾರದ ಸಂತೆ ಇದ್ದ ಕಾರಣ ಹರಕೆ ಹೊತ್ತ ಹುಲಿ ವೇಷದಾರಿಗಳು ಸಂತೆಯಲ್ಲಿ ಸಂಚರಿಸಿ ಹಣ ಸಂಗ್ರಹ ಮಾಡುತ್ತಿದ್ದ ಕಂಡು ಬರುತ್ತಿತ್ತು. ಅದರಲ್ಲೂ ಹುಲಿ ವೇಷ ಹಾಕಿದ್ದ ಚಿಕ್ಕ ಚಿಕ್ಕ ಮಕ್ಕಳು ಜನರ ಗಮನ ಸೆಳೆಯುತ್ತಿದ್ದರು. ಇನ್ನು ಕೆಲವರು ಕರಡಿ ವೇಷವನ್ನೂ ಹಾಕಿದ್ದರು.

     ಇದಕ್ಕು ಮೊದಲು ಗುರುವಾರ ರಾತ್ರಿ ದೇವರಿಗೆ ತಯಾರಿಸಿದ ಸಕ್ಕೆರೆ, ಬೆಲ್ಲ, ನೈವೈದ್ಯ ಸಮೇತ ದೇವರ ದರ್ಶನ ಪಡೆದುಕೊಂಡ ಭಕ್ತರು, ಅಲಾಯಿ ಕುಣಿಯಲ್ಲಿ ಬೆಂಕಿ ಹಾಕಿ, ಅದರಲ್ಲಿ ಉಪ್ಪು ಹಾಕುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಈ ಬಾರಿ ಕೇವಲ ಒಣ ಕಟ್ಟಿಗೆ ಹಾಕುವ ಮೂಲಕ ಬೆಂಕಿ ಮಾಡಲಾಗಿತ್ತು.

      ತಾಲ್ಲೂಕಿನ ಗುಡೇಕೋಟೆಯಲ್ಲಿ ಮೋಹರಾಂ ಹಬ್ಬವನ್ನು ಆಚರಣೆ ಮಾಡಲಾಯಿತು. ಗುರುವಾರ ಕತ್ತಲ ರಾತ್ರಿ ಆಚರಣೆ ಮಾಡಿದ ಭಕ್ತರು ಶುಕ್ರವಾರ ಸಂಜೆ ಪೀರಲ ದೇವರುಗಳನ್ನು ಭಕ್ತಿ ಶ್ರದ್ಧೆಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ವಿಸರ್ಜನೆ ಮಾಡಲಾಯಿತು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link