ಚಿಕ್ಕದಾಳವಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಸತ್ತವರ ಹೆಸರಲ್ಲಿ ನರೇಗಾ ಹಣ ಡ್ರಾ

ಮಿಡಿಗೇಶಿ:

ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಬಹಿರಂಗ

ಬಡವರು, ದೀನದಲಿತರ ಉದ್ಧಾರಕ್ಕೆಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ವರ್ಷಗಳಿಂದ ಕೆಲವು ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಬಡವ, ಶ್ರೀಮಂತ, ಆ ಜಾತಿ, ಈ ಜಾತಿ ಎನ್ನದೆಯೆ ಎಲ್ಲರ ಅನುಕೂಲಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೊಂದನ್ನು ಜಾರಿಗೆ ತಂದಿರುವ ಯೋಜನೆ ಶ್ಲಾಘನೀಯವಾದುದು.

ಅದರಲ್ಲೂ ಜಾಬ್ ಕಾರ್ಡ್‍ಗಳನ್ನು ಜಾರಿಗೆ ತಂದು, ಕೂಲಿ ಕಾರ್ಮಿಕರ ಖಾತೆಗೆ ನೇರ ಹಣ ಜಮೆಯಾಗುವ ಕಾನೂನು ಜಾರಿಯಲ್ಲಿದೆ. ಆದರೂ ಸಹ ಜಾಬ್‍ಕಾರ್ಡ್‍ನಲ್ಲಿ ಮೋಸವಾಗುತ್ತಿರುವ ಬಗ್ಗೆ ಸಾಕಷ್ಟು ವರದಿಗಳಾಗುತ್ತಲೆ ಇವೆ.

ನರೇಗಾ ಯೋಜನೆಯ ಬಹುತೇಕ ಕಾಮಗಾರಿಗಳು ಯಂತ್ರೋಪಕರಣಗಳಿಂದಲೇ ನಡೆಸುತ್ತಿದ್ದಾರೆಂಬುದು ಜಗಜ್ಜಾಹಿರಾಗಿರುವ ವಿಷಯವೇ ಆಗಿರುತ್ತದೆ. ಶಾಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಕುಟುಂಬದವರ, ವಯೋವೃದ್ಧರ ಹೆಸರುಗಳಲ್ಲಿ ಜಾಬ್ ಕಾರ್ಡ್‍ಗಳಿರುವುದು ತಿಳಿಯದ ವಿಷಯವೇನೂ ಅಲ್ಲ.

ನರೇಗಾ ಯೋಜನೆಯ ಕೆಲಸವೆಂದರೇನು ಎಂಬುದೇ ತಿಳಿಯದವರ ಬ್ಯಾಂಕಿನ ಖಾತೆಗೂ ಕೂಡ ಕೂಲಿ ಹಣ ಜಮೆಯಾಗುತ್ತಿದ್ದು, ಹಣ ಪಡೆದವರಿಂದ ಕೆಲವು ನಕಲಿ ಗುತ್ತಿಗೆದಾರರು ಸದರಿಯವರಿಗೆ ಕಮಿಷನ್ ನೀಡಿ ಬ್ಯಾಂಕಿನ ಒಳಗೆ ಕರೆತಂದು ಹಣ ಡ್ರಾ ಮಾಡಿಸಿಕೊಳ್ಳುತ್ತಿರುವುದು ಇಂದಿಗೂ ನಡೆದು ಬರುತ್ತಲೇ ಇರುವ ವಿಷಯ ಗುಟ್ಟಾಗೇನು ಉಳಿದಿರುವುದಿಲ್ಲ.

ಇದರಲ್ಲಿನ ಭ್ರಷ್ಟಾಚಾರವನ್ನು ಸರಿಪಡಿಸಲೆಂದೆ ಸರ್ಕಾರ ಸಾಮಾಜಿಕ ಪರಿಶೋಧನಾ ಘಟಕವೊಂದನ್ನು ನೇಮಿಸಿರುತ್ತದೆ. ಸದರಿ ಘಟಕವು ಜಿಲ್ಲಾ ಪಂಚಾಯಿತಿ ಕಂಟ್ರೋಲ್‍ನಲ್ಲಿರುತ್ತದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಗ್ರಾಮ ಸಭೆ ಕರೆದು ಒಂದು ವರ್ಷಕ್ಕೆ ಎರಡೆರಡು ಬಾರಿ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆ.

ಆದರೂ ಸಹ ಕೆಲ ಪಿ.ಡಿ.ಓ., ಎಂಜಿನಿಯರ್, ಡಾಟಾ ಎಂಟ್ರಿ ಆಪರೇಟರ್, ಕಾರ್ಯದರ್ಶಿಗಳ ಜೊತೆಗೆ ಕೆಲ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರುಗಳೂ ಸೇರಿಕೊಂಡು ನರೇಗಾ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಸಿಕ್ಕಿದಷ್ಟು ಸೀರುಂಡೆ ಎನ್ನುವ ರೀತಿಯಲ್ಲಿ ಅಲ್ಲಲ್ಲಿ ನರೇಗಾ ಅಕ್ರಮಗಳು ಕಂಡುಬರುತ್ತಲೇ ಇವೆ. ಆದರೂ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮಾತ್ರ ಕಾರಣ ಕೇಳಿ ನೋಟೀಸ್ ನೀಡಿ ಕೈ ತೊಳೆದುಕೊಳ್ಳುತ್ತಿರುವುದು ಅಕ್ರಮಗಳಿಗೆ ಇನ್ನಷ್ಟು ಇಂಬು ನೀಡಿದಂತಾಗಿದೆ.

ಸಾಮಾಜಿಕ ಪರಿಶೋಧನಾ ವರದಿಯಲ್ಲಿನ ಆಕ್ಷೇಪಣೆಗಳು ಒಂದೊಂದು ಗ್ರಾ.ಪಂ.ನಲ್ಲೂ ಲಕ್ಷ್ಷಾಂತರ, ಕೋಟ್ಯಂತರ ರೂ.ಗಳಾಗಿದ್ದು, ವಸೂಲಾತಿ ಮಾತ್ರ ಸಾವಿರಾರು ರೂಪಾಯಿಗಳು ಮಾತ್ರವಾಗಿರುತ್ತವೆ. ಮಿಕ್ಕ ಹಣ ವಸೂಲಿಯಾಗುವುದು ಯಾವಾಗ? ತಪ್ಪು ಮಾಡಿದ ಅಧಿಕಾರಿಗಳಿಗೆ ಮಾತ್ರ ಮುಂಬಡ್ತಿಗಳೇನು ಕಡಿತಗೊಳಿಸಿರುವ ಉದಾಹರಣೆಗಳೆ ಇರುವುದಿಲ್ಲ. ಮುಂದೇನಾಗುವುದು ಕಾದು ನೋಡಬೇಕಾಗಿರುತ್ತದೆ.

ಉದಾ :

ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿಯು 2021-22 ನೆ ಸಾಲಿನ 1 ಮತ್ತು 2ನೇ ಹಂತದ ಸಾಮಾಜಿಕ ಪರಿಶೋಧನಾ ವರದಿಯನ್ನು (01-10-2020 ರಿಂದ 31-03-2021 ಮತ್ತು 01-0-2021 ರಿಂದ 30-09-2021 ರ ಅವಧಿಯ ಖರ್ಚು) ಸಲ್ಲಿಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ ಪತ್ರಗಳ ಅನುಸಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕಡತ ಹಾಗೂ ಕಛೇರಿ ದಾಖಲಾತಿ, ಕಾಮಗಾರಿಗಳನ್ನು ಪರಿಶೀಲಿಸಿ ಗ್ರಾಮ ಸಭೆಯು ಸಾಮಾಜಿಕ ಪರಿಶೋಧನಾ ವರದಿಯನ್ನು ಅವಗಾಹನೆಗೆ ಸಲ್ಲಿಸಿದೆ.

ಗ್ರಾಮ ಪಂಚಾಯಿತಿ ಕೂಲಿ ರೂ. 7,33,550, ಸಾಮಗ್ರಿ 75,72,570, ಒಟ್ಟು 1,49,07,920 ವಸೂಲಾತಿ 71,618, ಆಕ್ಷೇಪಣೆ 14,3,58,309, ಒಟ್ಟು 1,44,29,927 ಒಟ್ಟ್ಟು ಆಕ್ಷೇಪಣೆ 1,43,58,309, ಒಟ್ಟು ವಸೂಲಾತಿ 75,468, ಒಟ್ಟು ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ (ಸಾಮಾಜಿಕ), ತೋಟಗಾರಿಕೆ, ರೇಷ್ಮೆ ಇಲಾಖೆ.

ಆಕ್ಷೇಪಣೆಗಳ ವಿವರ :-

ಜನಕಲೋಟಿ ಗ್ರಾಮದ ರಾಮಕ್ಕ ಕೋ ಸಣ್ಣ ರಾಮಯ್ಯ ಸ.ನಂ 32/4 ರಲ್ಲಿ ಹಿಪ್ಪುನೇರಳೆ ನಾಟಿ ಮತ್ತು ನಿರ್ವಹಣೆ (1525005/ಐ.ಎಫ್/933930428930006) ಈ ಕಾಮಗಾರಿಯಲ್ಲಿ ಕೆಲಸ ಮಾಡಿರುವ ಉದ್ಯೋಗ ಚೀಟಿ ಸಂಖ್ಯೆ ಕೆ.ಎನ್.25-005-009005/187 ಗೋವಿಂದಪ್ಪ/ಸಿದ್ದಗಂಗಮ್ಮ ರವರಿಗೆ ಇ.ಎನ್.ಎಂ.ಆರ್ ಸಂಖ್ಯೆ 6857(1734) ರಲ್ಲಿ 6 ಮಾನವ ದಿನಗಳಿಗೆ ಕೆಲಸ ನಿರ್ವಹಿಸಿರುವುದಾಗಿ ತಾ 09-07-2021 ರಿಂದ 14-07-2021 ರಂದು ಎಂ.ಐ.ಎಸ್ ಮಾಡಿ ಹಣ ಪಾವತಿಸಿರುತ್ತಾರೆ. ಆದರೆ ಗೋವಿಂದಪ್ಪ/ ಸಿದ್ದಗಂಗಮ್ಮ ರವರು ಮರಣ ಹೊಂದಿರುತ್ತಾರೆಂದು ಮನೆ, ಮನೆ ಭೇಟಿ ಸಂದರ್ಭದಲ್ಲಿ ತಿಳಿದು ಬಂದಿದೆ..!

ಕೆಲವು ಕಾಮಗಾರಿಗಳಿಗೆ ಸಹಿಗಳು ತಾಳೆಯಾಗುತ್ತಿಲ್ಲ ಎಂಬ ಆರೋಪವಿದೆ. ಚೆಕ್‍ಮೆಜ್ಹರ್‍ಮೆಂಟ್ ಇರದೆ ಇರುವುದು ಮಾಮೂಲಿ ಮಾಡಿಕೊಂಡಿರುತ್ತಾರೆ. ಕೆಲ ಕಾಮಗಾರಿಗಳ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ ಪಾವತಿಸಿರುವ ಸಾಕಷ್ಟು ಉದಾಹರಣೆಗಳು ಇವೆ. ಓಬಳಮ್ಮ ಎಂಬುವರು 31-01-2018ರಲ್ಲಿ ಮರಣ ಹೊಂದಿದ್ದರೂ 8 ಮಾನವ ದಿನಗಳ, ರಾಮಕ್ಕ ನರಸಿಂಹಯ್ಯ 05-11-2020ರಲ್ಲಿ ಮರಣ ಹೊಂದಿದ್ದರೂ 8 ದಿನಗಳ ಹಣ ಡ್ರಾ ಆಗಿದೆ.

ಅಂದಾಜು ಕಡತದಲ್ಲಿಲ್ಲದೆ ಇರುವುದು, ದೊಡ್ಡದಾಳವಟ್ಟ ಗ್ರಾಮದ ಜಯಮ್ಮ 31/08/2018ರಲ್ಲಿ ಮರಣ ಹೊಂದಿದ್ದರೂ 16 ಮಾನವ ದಿನಗಳಿಗೆ ಕೆಲಸ ನಿರ್ವಹಿಸಿರುವುದಾಗಿ ಹಣ ಡ್ರಾ ಆಗಿದೆ. ಚಿಕ್ಕದಾಳವಟ್ಟ ಗ್ರಾಮದ ಸ.ನಂ 68/3 ಈಶ್ವರಯ್ಯ ಬಿನ್ ಲೇ. ಮಲ್ಲಪ್ಪರವರ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಎರಡು ಕಡೆ (1525005009/ಐ.ಎಫ್.93393042892774355).

ಈಶ್ವರಮ್ಮರವರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ಹೆಸರಿಗೆ 8 ಮಾನವ ದಿನಗಳಿಗೆ ಕೆಲಸ ನಿರ್ವಹಿಸಿರುವುದಾಗಿ ಹಣ ಡ್ರಾ ಮಾಡಲಾಗಿದೆ.

2021-22 ನೆ ಹಂತದ ಸಾಮಾಜಿಕ ಪರಿಶೋಧನಾ ವರದಿ ಪ್ರಕಾರ ಕೂಲಿ, ಸಾಮಗ್ರಿ ವೆಚ್ಚ, ಒಟ್ಟು ವಸೂಲಾತಿ ಮತ್ತು ಆಕ್ಷೇಪಣೆ ಸೇರಿ ಒಟ್ಟು 3340730 = 8921765 26587 7621004 7647591

ಈ ರೀತಿಯಾಗಿ ಇನ್ನೂ ಹೆಚ್ಚಿನ ಹಣ ನರೇಗಾ ಯೋಜನೆಯಡಿ ಉಪಯೋಗಕ್ಕಿಂತಲೂ ದುರುಪಯೋಗವೇ ಜಾಸ್ತಿಯಾಗಿರುತ್ತದೆ. ಈ ಬಗ್ಗೆ ಈಗಾಗಲೇ ಎರಡು ಬಾರಿ ಈ ಹಿಂದಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಅವ್ಯವಹಾರಗಳ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ಆಗಿದ್ದರೂ ಸಹ ಅಂದಿನ ಇ.ಓ. ಮತ್ತು ಸಿ.ಎಸ್. ರವರು ಯಾವ ಶಿಸ್ತಿನ ಕ್ರಮ ಕ್ಕೆಗೊಂಡಿರುತ್ತಾರೆಂಬುದು ಇನ್ನೂ ನಿಗೂಢವಾಗಿರುತ್ತದೆ. ಈ ಕುರಿತು ಸಂಬಂಧಿಸಿದವರೆ ಉತ್ತರಿಸಬೇಕಾಗುತ್ತದೆ ಎಂಬುದು ತಾಲ್ಲೂಕಿನ ಪ್ರಜ್ಞಾವಂತ ನಾಗರಿಕರ ಎಚ್ಚರಿಕೆಯ ಮಾತುಗಳಾಗಿರುತ್ತವೆ.

 ನರೇಗಾ ಯೋಜನೆಯ ಬಹುತೇಕ ಕಾಮಗಾರಿಗಳನ್ನು ಯಂತ್ರೋಪಕರಣಗಳಿಂದಲೆ ನಡೆಸುತ್ತಿದ್ದಾರೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೆ. ಶಾಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಕುಟುಂಬದವರ, ವಯೋವೃದ್ಧರ ಹೆಸರುಗಳಲ್ಲಿ ಜಾಬ್‍ಕಾರ್ಡ್‍ಗಳಿರುವುದು ಆಶ್ಚಯವೇನಲ್ಲ.

ನರೇಗಾ ಯೋಜನೆಯ ಕೆಲಸವೆಂದರೇನು ಎಂಬುದೇ ತಿಳಿಯದವರ ಬ್ಯಾಂಕಿನ ಖಾತೆಗೂ ಕೂಡ ಕೂಲಿ ಹಣ ಜಮೆಯಾಗುತ್ತಿದ್ದು, ಹಣ ಪಡೆದವರಿಂದ ಕೆಲವು ನಕಲಿ ಗುತ್ತಿಗೆದಾರರು ಸದರಿಯವರಿಗೆ ಕಮಿಷನ್ ನೀಡಿ ಬ್ಯಾಂಕಿನ ಒಳಗೆ ಕರೆತಂದು ಹಣ ಡ್ರಾ ಮಾಡಿಸಿಕೊಳ್ಳುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap