ಐವರು ನಕ್ಸಲರ ಹತ್ಯೆ…!

ಮಾಲ್ಕಾಂಗಿರಿ:

       ಒಡಿಶಾದ ಕಾಲಿಮೇಡಾ ಬಳಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಐವರು ನಕ್ಸಲೀಯರನ್ನು  ಹತ್ಯೆ ಮಾಡಿದ್ದಾರೆ.

       ನಕ್ಸಲರ  ಮೃತದೇಹಳಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಭದ್ರತಾ ಪಡೆಯ  ಅಧಿಕಾರಿಗಳು ಹೇಳಿದ್ದಾರೆ.ಡಿಸೆಂಬರ್ 11 ರಂದು ಮತದಾನ ನಡೆಯುವ ಛತ್ತೀಸ್ ಗಡದ ದಾಂತೇವಾಡ ಜಿಲ್ಲೆಯ ಬಳಿ ಕಳೆದ ವಾರ  ನಡೆದ  ಕಾರ್ಯಾಚರಣೆಯಲ್ಲಿ  ಮೂವರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮರಾಮ್ಯಾನ್ ನಕ್ಸಲೀಯರಿಂದ ಹತ್ಯೆಯಾಗಿದ್ದರು.

       ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ ಐವರು ನಕ್ಸಲರು ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಇನ್ನು ಅವರ ಗುಉತು ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link