ಚೆನ್ನೈ:

ತಾನು ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ತೆಗೆದುಕೊಂಡಿದ್ದ ಸುಮಾರು 800 ರುಪಾಯಿ ಬೆಲೆ ಬಾಳುವ ಚಪ್ಪಲಿ ಕಳೆದುಹೋಗಿರುವುದಕ್ಕೆ ವ್ಯಕ್ತಿಯೊಬ್ಬರು ಟೊಂಡಿಯಾರ್ ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಸ್ಥಲಿಯ ಮೂಲಗಳು ತಿಳಿಸಿವೆ.
ನಗರದಲ್ಲಿ ಒಂದು ಸಣ್ಣ ರಿಪೇರಿ ಅಂಗಡಿಯ ಮಾಲೀಕನಾಗಿರುವ ರಾಜೇಶ್ ಗುಪ್ತಾ ಅವರು ತಮ್ಮ ಆರೋಗ್ಯದ ತಪಾಸಣೆ ವಿಚಾರವಾಗಿ ಖಾಸಗಿ ಲ್ಯಾಬ್ ನಲ್ಲಿ ರಕ್ತ ಪರೀಕ್ಷೆಗಾಗಿ ತೆರಳಿದ್ದರು. ಲ್ಯಾಬ್ ಒಳಗೆ ಹೋಗುವ ಮನ್ನ ಬಾಗಿಲ ಬಳೀಯೇ ಚಪ್ಪಲಿ ಬಿಟ್ಟು ಒಳ ಹೋಗಿದ್ದಾರೆ ರಾಜೇಶ್ ತಪಾಸಣೆ ಮುಗಿಸಿಕೊಂಡು ಹೊರಬರುವಷ್ಟರಲ್ಲಿ ತಮ್ಮ ಚಪ್ಪಲಿ ಕಾಣೆಯಾಗಿರುವುದನ್ನು ನೋಡಿ ಮನನೊಂದು ಹತ್ತಿರದ ಪೊಲೀಸ ಠಾಣೆಗೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಗುಪ್ತಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
