ಛತ್ತೀಸ್’ಗಡ:
ರಾಯ್ ಪುರದಿಂದ ಸುಮಾರು 417 ಕಿ.ಮಿ ದೂರದಲ್ಲಿರುವ ಬಿಜಾಪುರದಲ್ಲಿ ಇಂದು ಬೆಳಗ್ಗೆ ನಡೆದ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ 10 ನಕ್ಸಲೀಯರನ್ನು ಭದ್ರತಾ ಪಡೆಗಳು ಹತ್ಯೆ ಮಾಡಲಾಗಿದೆ .
ಬೈರಾಮ್ ಗಡದಿಂದ 22 ಕಿ.ಮಿ ದೂರದಲ್ಲಿರುವ ಬೊರ್ಗಾ ಟಾಕಿಲೊಡ್ ಗ್ರಾಮದ ಬಳಿಯಲ್ಲಿರುವ ನಕ್ಸಲ್ ಕ್ಯಾಂಪಿನ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಾಚರಣೆ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸರು ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 11 ಗಂಟೆ ನಕ್ಸಲೀಯರು ಹಾಗೂ ಭದ್ರತಾ ಪಡೆಗಳ ನಡುವಣ ಗುಂಡಿನ ಕಾಳಗ ನಡೆದಿದ್ದು, ಎನ್ ಕೌಂಟರ್ ನಲ್ಲಿ 10 ನಕ್ಸಲೀಯರು ಮೃತರಾಗಿದ್ದರು ಅವರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಮೊಹಿತ್ ಗಾರ್ಗ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ