ಆಗ್ರಾ
ಜಮ್ಮು ಮತ್ತು ಕಾಶ್ಮೀರದ ಸುಮಾರು 30 ಕೈದಿಗಳು ನಿನ್ನೆ ಮಧ್ಯಾಹ್ನ ಖೇರಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ನಂತರ ಅವರನ್ನು ಆಗ್ರಾದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಈ ಬಗ್ಗೆ ವಿಚಾರಿಸಿದಾಗ ಜೈಲು ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೈದಿಗಳನ್ನು ಜೈಲಿಗೆ ಕರೆದೊಯ್ಯುವ ಮೂರು ವಾಹನಗಳು ಅದರ ಕಿಟಕಿಗಳನ್ನು ದಪ್ಪ ಬಟ್ಟೆಯಿಂದ ಮುಚ್ಚಿದ್ದವು. ಹೆಚ್ಚುವರಿ ಪಡೆಗಳು, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಮತ್ತು ಎಸ್‌ಒವಿಟಿ ತಂಡಗಳನ್ನು ಸಹ ಜೈಲಿನ ಹೊರಗೆ ಜಜಮಾವಣೆ ಮಾಡಲಾಗಿದೆ.
ಕೈದಿಗಳನ್ನು ಕರೆತರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಮೊದಲೇ ತೆರವುಗೊಳಿಸಲಾಗಿತ್ತು ಮತ್ತು ಕೈದಿಗಳನ್ನು ಕರೆದೊಯ್ಯುವ ಮೂರು ವಾಹನಗಳಿಗೆ ಸೂಕ್ತ ಭದ್ರತೆಯನನ್ನು ಪೊಲೀಸರು ನೀಡಿದ್ದರು .ಕೇಂದ್ರವು ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ಎ ಅನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ಮುಮಜಾಗ್ರತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಗಾ ವಹಿಸಲು ಹೆಚ್ಚಿನ ಸೇನೆ ಅರೆಸೇನಾ ಪಡೆ ಮುಂತಾದವುಗಳನ್ನು ಮೊದಲೇ ಕ್ರೌಡೀಕರಿಸ ಲಾಗಿತ್ತು ಎಚ್ಚರಿಕೆಯ ಕ್ರಮದಲ್ಲಿದೆ. ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಅನಿರ್ದಿಷ್ಟ ಕರ್ಫ್ಯೂ ಜಾರಿಗೆ ತರಲಾಗಿದೆ.