ನವದೆಹಲಿ 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ವಾರ್ತಾ ಕೇಂದ್ರ, ನವದೆಹಲಿ ಹಾಗು ಜೈಪುರ್ ಕರ್ನಾಟಕ ಸಂಘದ ವತಿಯಿಂದ ಜೈಪುರ್ ನಲ್ಲಿ 64ನೇ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಕನ್ನಡಿಗರಾದ ರಾಜಸ್ತಾನದ ಭ್ರಷ್ಟಾಚಾರ ನಿಗ್ರಹದಳದ ಮುಖ್ಯಸ್ಥ ಎಂ.ಎನ್.ದಿನೇಶ್ ಅವರು ದೇಶದ ಇತರೆ ಭಾಷೆಗಳಿಗೆ ಮತ್ತು ರಾಜ್ಯಗಳಿಗೆ ಹೋಲಿಸಿದರೆ ಕನ್ನಡ ಭಾಷೆ, ಕಲೆ, ಸಂಸ್ಕೃತಿ , ನೈಸರ್ಗಿಕ ಪ್ರಕೃತಿ ಶ್ರೀಮಂತವಾಗಿದೆ. ಹೊರನಾಡ ಕನ್ನಡಿಗರಾದ ನಾವೆಲ್ಲ ರಾಜ್ಯದ ರಾಯಭಾರಿಗಳಾಗಿ ಇದನ್ನು ಅನ್ಯ ಭಾಷಿಕರಿಗೆ ತಿಳಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಮಾತನಾಡಿ, ರಾಜ್ಯದಿಂದ ಹೊರಗಡೆ ಕೆಲಸ ನಿರ್ವಹಿಸುವ ಹೊರನಾಡ ಕನ್ನಡಿಗರಿಗೆ ಮತ್ತು ಯುವಪೀಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯೊAದಿಗೆ ಸಾಗಲು ಕರ್ನಾಟಕ ರಾಜ್ಯೋತ್ಸವದಂತ ಹಲವು ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಪಂಪ -ರನ್ನ- ಜನ್ನ- ಕುಮಾರವ್ಯಾಸರಂತಹ ಕವಿಗಳು, ಆನೇಕ ಸಾಹಿತಿಗಳು ತಮ್ಮದೆಯಾದ ರೀತಿಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿ, ಕನ್ನಡ ಭಾಷೆ ಮತ್ತು ನಾಡನ್ನು ಶ್ರೀಮಂತಗೊಳಿಸಿದ್ದಾರೆ, ಅದನ್ನು ಉಳಿಸಿಕೊಂಡು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರದ್ದು,ಹೊರನಾಡ ಕನ್ನಡಿಗರಾದ ನಾವೇಲ್ಲ ರಾಜ್ಯದ ರಾಯಭಾರಿಗಳಂತೆ ಶ್ರಮಿಸೋಣ ಎಂದು ಮಾಳವಿಯ ನ್ಯಾಷನಲ್ ಇನ್ಸಟ್ಯೂಟ್ ಅಫ್ ಟೆಕ್ನಲಾಜಿಯ ನಿರ್ದೇಶಕ, ಪ್ರೊ.ಉದಯ ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಇನ್ಸಟ್ಯೂಟ್ ಅಫ್ ಅಗ್ರಿಕಲ್ಚರ್ ಮಾರ್ಕೆಟಿಂಗ್ ನ ಮಹಾ ನಿರ್ದೇಶಕ ಡಾ.ಪಿ.ಚಂದ್ರಶೇಖರ್, ಜೈಪುರ್ ಮಣಿಪಾಲ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ: ಜಿ.ಕೆ.ಪ್ರಭು, ಕರ್ನಾಟಕ ವಾರ್ತಾಕೇಂದ್ರದ ವಾರ್ತಾಧಿಕಾರಿ ಡಾ.ಮೈಸೂರು ಗಿರೀಶ್, ಕನ್ನಡಿಗರಾದ ರಾಜಸ್ತಾನದ ಜಿಎಸ್ಟಿ ಆಯುಕ್ತ ಪ್ರೀತಮ್ ಯಶವಂತ್, ಶ್ರೀನಿಧಿ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್, ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
