ವಾಷಿಂಗ್ಟನ್:
ದಿನ ದಿನೇ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಸಬ್ ಮೆರೀನ್ ರೆಡಾರ್ ನಿರೋಧಕ ಹಾಗೂ ಬಹುಉಪಯೋಗಿ ಎಂ.ಹೆಚ್.-60ಆರ್ ಸೀ ಹಾಕ್ ಹೆಲಿಕಾಫ್ಟರ್ ಭಾರತೀಯ ನೌಕಾದಳದ ಬತ್ತಳಿಕೆಯನ್ನು ಸದ್ಯದಲ್ಲೇ ಸೇರಿಕೊಳ್ಳಲಿದೆ. 24 ಸೀ ಹಾಕ್ ಹೆಲಿಕಾಫ್ಟರ್ ಗಳನ್ನು ಅಂದಾಜು 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಭಾರತಕ್ಕೆ ಮಾರಾಟ ಮಾಡಲು ಅಮೆರಿಕಾ ಒಪ್ಪಿಕೊಂಡಿದ್ದು. ಭಾರತೀಯ ಜಲಗಡಿಯನ್ನು ಸುಭದ್ರವಾಗಿಡಲು ಹಾಗೂ ಇತ್ತೀಚಿನ ದಿನಗಳಲ್ಲಿ ಜಲಮಾರ್ಗಗಳಿಂದಲೂ ದೇಶದ ಸಾರ್ವಭೌಮತೆಗೆ ಅಪಾಯ ಒದಗುವ ಸಾಧ್ಯತೆಗಳಿರುವುದ ರಿಂದ ನೌಕಾಪಡೆಗೆ ಈ ರಿತಿಯ ಸುಸಜ್ಜಿತ ಹೆಲಿಕಾಫ್ಟರ್ ಗಳ ಅಗತ್ಯ ಎಂದು ತಿಳಿಸಿದ್ದಾರೆ.
ಸಾಗರ ತಳದಲ್ಲಿರುವ ಸಬ್ ಮೆರೀನ್ ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ, ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಈ ‘ರೋಮಿಯೋ’ ಹೆಲಿಕಾಫ್ಟರ್ ಗಳಿದೆ. ಅಮೆರಿಕಾದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟ ಸಂಸ್ಥೆ ಲಾಕ್ ಹೀಡ್ ಮಾರ್ಟಿನ್ ನಿರ್ಮಿತ ಈ ಅತ್ಯಾಧುನಿಕ ಹೆಲಿಕಾಫ್ಟರ್ ಗಳು ಮುಂಬರುವ ದಿನಗಳಲ್ಲಿ, ಸದ್ಯ ಭಾರತೀಯ ನೌಕಾಪಡೆಯ ಬಳಿ ಇರುವ ಇಂಗ್ಲೆಡ್ ನ ಹಳೆಯ ಮಾದರಿ ಹೆಲಿಕಾಫ್ಟರ್ ಗಳಿಗೆ ಬದಲಿಯಾಗಿ ಕಾರ್ಯನಿರ್ವಹಿಸಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








