ಏರ್ ಸ್ಟ್ರೈಕ್ : ಕಾಂಗ್ರೆಸ್ ಮುಖಂಡನ ರಾಜೀನಾಮೆ

ಪಾಟ್ನಾ:
         ಕೆಲ ದಿನಗಳಿಂದ ದೇಶದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ  ಬಾಲಾಕೋಟ್‌ ಉಗ್ರರ ನೆಲೆಗಳ ಮೇಲೆ ವಾಯುಪಡೆಯು ನಡೆಸಿದ ದಾಳಿಯ ಕುರಿತು ಸಾಕ್ಷ್ಯಧಾರಗಳನ್ನು ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ನಡೆಯನ್ನು ವಿರೋಧಿಸಿ ಬಿಹಾರ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಪಕ್ಷವನ್ನೇ ತ್ಯಜಿಸಿದ್ದಾರೆ.
         ಹೌದು.. ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ನಡೆಸಿದ್ದ ವಾಯುದಾಳಿ ಸಂಬಂಧ ಇನ್ನೂ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ವಾಯುದಾಳಿಗೆ ಸಾಕ್ಷ್ಯ ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಅವರದೇ ಪಕ್ಷದ ಮುಖಂಡರೊಬ್ಬರು ತಿರುಗಿಬಿದ್ದಿದ್ದಾರೆ. 
        ಮಾಧ್ಯಮದವರೊಂದಿಗೆ ಮಾತನಾಡಿದ ಶರ್ಮಾ, ‘ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ, ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡುತ್ತಿದ್ದೇನೆ. ಪಾಕಿಸ್ತಾನದಲ್ಲಿರುವ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯ ಸಾಕ್ಷಗಳನ್ನು ಕೇಳಿದ ಕಾಂಗ್ರೆಸ್‌ ನಡೆಯಿಂದ ಬೇಸರವಾಗಿದೆ. ಕಳೆದ 30 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಆದರೆ ನಮ್ಮ ನಾಯಕರ ಇತ್ತೀಚಿನ ಕೆಲ ನಡೆಗಳು ಸರಿಯಿಲ್ಲ. ಸೈನಿಕರ ಶೌರ್ಯವನ್ನೇ ಪ್ರಶ್ನೆ ಮಾಡುವ ಮೂಲಕ ಕೆಲ ನಾಯಕರು ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
       ಅಂತೆಯೇ ತಮ್ಮ ನಾಯಕರ ನಡೆಯಿಂದಾಗಿ ಜನ ಇಂದು ಕಾಂಗ್ರೆಸ್ ಮುಖಂಡರನ್ನು ಪಾಕಿಸ್ತಾನದ ಏಜೆಂಟರಂತೆ ನೋಡುತ್ತಿದ್ದಾರೆ. ನಿಜಕ್ಕೂ ನನಗೆ ಇದರಿಂದ ಬೇಸರವಾಗಿದೆ ಮತ್ತು ಪಕ್ಷದ ನಡೆ ಬಗ್ಗೆ ನನಗೆ ಅಸಹ್ಯವಾಗುತ್ತಿದೆ. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜಿನಾಮೆ ನೀಡುತ್ತಿದೇನೆ ಎಂದು ಶರ್ಮಾ ಹೇಳಿದ್ದಾರೆ.
        ವಾಯುದಾಳಿಯಿಂದಾಗಿ 250ಕ್ಕೂ ಹೆಚ್ಚು ಉ್ರಗರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ದಾಳಿಯ ಸಾಕ್ಷ್ಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತ್ತು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಾಳಿಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link