ನವದೆಹಲಿ:
ಮಾರಾಣಾಂತಿಕವಾಗಿರುವ ಕೊರೋನಾ ವೈರಸ್ ಗೆ ಈವರೆಗೂ ಸುಮಾರು 18 ಮಂದಿಯ ಬಲಿಯಾಗಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 650ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.ರಾಜ್ಯಾವಾರು ನೋಡುವುದಾದರೆ ಗುಜರಾತ್, ತಮಿಳು ನಾಡು, ಮಧ್ಯಪ್ರದೇಶದಲ್ಲಿ ವೈರಸ್’ ತಲಾ ಒಬ್ಬರು ಮೃತಪಟ್ಟಿದ್ದು, ಇದರಿಂದ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಮಧ್ಯೆ ಆಘಾತಕಾರಿ ಬೆಳವಣಿಗೆಯೋದರಲ್ಲಿ ತಮಿಳುನಾಡಿಗೆ ಬಂದಿದ್ದ ಇಂಡೋನೇಷ್ಯಾದ 8 ಮಂದಿ ಪ್ರಜೆಗಳಲ್ಲಿ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದರಂತೆ ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇಂಡೋನೇಷ್ಯಾದಿಂದ ಬಂದಿರುವ 8 ಮಂದಿಯ ಪೈಕಿ ಏರ್ವ ಮುಸ್ಲಿಂ ಮೌಲ್ವಿಯಾಗಿದ್ದು, ಈದ, ಮಾರ್ಚ್ 11 ರಂದು ಕೇರಳ ಎಕ್ಸ್’ಪ್ರೆಸ್ ನಲ್ಲಿ ಸೇಲಂವರೆಗೂ ಪ್ರಯಾಣ ಬೆಳೆಸಿದ್ದ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ