ಮುಂಬೈ:
ರಾಜ್ಯ ಸರ್ಕಾರದ ಸಚವ ಸಂಪುಟ ವಿಸ್ತರಣೆ ಬೆನ್ನಲೆ ಅಸಮಾಧಾನ ಸ್ಫೋಟಗೊಂಡಿದೆ ಬೀಡ್ ಜಿಲ್ಲೆಯ ಎನ್ ಸಿಪಿ ಶಾಸಕ ಪ್ರಕಾಶ್ ಸೊಲಾಂಕೆ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಮ್ಮಂತವರು ರಾಜಕೀಯ ಮಾಡಲು ಅನರ್ಹರು ಎಂದು ಅವರು ಹೇಳಿದ್ದಾರೆ.
ಮಜಲ್ಗಾಂವ್ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿರುದ್ದ ಸೋಲಾಂಕೆ ಅವರ ರಾಜೀನಾಮೆಯ ಹಿಂದೆ ಸಂಪುಟಕ್ಕೆ ಅವರನ್ನು ಸೇರಿಸಿಕೊಳ್ಳದಿರುವುದು ಪ್ರಮುಖ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ ಆದರೆ, ಇದನ್ನು ಅವರು ಸ್ಪಷ್ಠವಾಗಿ ನಿರಾಕರಿಸಿದ್ದಾರೆ, ಈಗಿನ ಸಂಪುಟ ವಿಸ್ತರಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಾವು ಈ ಯುಗದ ರಾಜಕೀಯಕ್ಕೆ ಯೋಗ್ಯರಲ್ಲ ಎಂಬುದು ಸಾಬೀತಾದಂತಿದೆ ಎಂದಿದ್ದಾರೆ. ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಪ್ರತಿಕ್ರಿಯಿಸಿದ ಅವರು ನಾನು ರಾಜಕೀಯದಿಂದ ದೂರ ಉಳಿಯುವುದಾಗಿ ಎಂದು ಹೇಳಿದ್ದಾರೆ.
ಪಕ್ಷದ ಯಾವುದೇ ನಾಯಕರೊಂದಿಗೆ ತಮಗೆ ಅಸಮಾಧಾನವಿಲ್ಲ, ಇಂದು ಮಧ್ಯಾಹ್ನ ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ . ತಮ್ಮ ರಾಜೀನಾಮೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ