ಹೀರೋ ಕಾರ್ಪ್ ಜೊತೆ ಒಪ್ಪಂದಕ್ಕೆ ಮುಂದಾಯಿತೇ ಹಾರ್ಲೆ..?

     ಸತತ ಪ್ರಯತ್ನಗಳ ಭಾರತದಲ್ಲಿ ನೆಲೆಯೂರಲು ವಿಫಲಗೊಂಡಿದ್ದ ಹಾರ್ಲೇ ಡೇವಿಡ್ ಸನ್ ಇಂಡಿಯಾ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಸ್ಥಳೀಯವಾಗಿ ಹಾರ್ಲೆ ಡೇವಿಡ್ ಸನ್ ದ್ವಿಚಕ್ರವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಹಿರೋ ಮೋಟೋ ಕಾರ್ಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.

     ಹಾರ್ಲೆ ಡೇವಿಡ್ ಸನ್ ಸಂಸ್ಥೆಯ ಸೇಲ್ಸ್ ನ್ನೂ ನಿಲ್ಲಿಸಲಿದ್ದು, ವಿತರಣೆಗಾಗಿ ಹಿರೋ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಒಪ್ಪಂದ ಯಶಸ್ವಿಯಾದರೆ ಭಾರತಕ್ಕೆ ಹಿರೋ ಕಂಪನಿ ಹಾರ್ಲೆ ಬೈಕ್ ಗಳನ್ನು ಆಮದು ಮಾಡೊಕೊಂಡು ವಿತರಣೆ ಮಾಡಲಿದೆ.ಭಾರತದಲ್ಲಿ ಹಾರ್ಲೇ ಬೈಕ್ಸ್ ಗೆ ಹಿರೋ ಮಾಸ್ಟರ್ ಡಿಸ್ಟ್ರಿಬ್ಯೂಟರ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಹಾರ್ಲೆ-ಹಿರೋ ಸಂಸ್ಥೆಗಳ ನಡುವೆ ಮಾತುಕತೆ ನಡೆಸುತ್ತಿವೆ. 300-600 ಸಿಸಿ ಇಂಜಿನ್ ಸಾಮರ್ಥ್ಯದ ಹಾರ್ಲೆ ಡೇವಿಡ್ ಸನ್ ನ  ಒಂದು ಆವೃತ್ತಿಯ ಬೈಕ್ ಗೆ ಹಿರೋ ಸಂಸ್ಥೆ ಕಾಂಟ್ರಾಕ್ಟ್ ಉತ್ಪಾದಕ ಸಂಸ್ಥೆಯಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ ಶೀಘ್ರವೇ ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link