ಗಂಗಾ ಸ್ವಚ್ಚತೆಯಲ್ಲಿ ವಿಫಲವಾದ ಕೇಂದ್ರ ಸರ್ಕಾರ : ಪರಿಸರವಾದಿಗಳು

0
16

ನವದೆಹಲಿ:

       ಸುಮಾರು 2ಸಾವಿರ ಕೋಟಿ ರೂ.ವೆಚ್ಚದಲ್ಲಿ ಗಂಗಾ ನದಿಯನ್ನು ಶುದ್ಧೀಕರಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನಮಾಮಿ ಗಂಗೆ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಆಗುತ್ತಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ.ಕೇಂದ್ರ ಜಲಸಂಪನ್ಮೂಲ ಸಚಿವಾಲಯ,ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಸಹಭಾಗಿತ್ವದಡಿ 2016ರಲ್ಲಿ ರಾಷ್ಟ್ರೀಯ ಗಂಗಾ ನದಿ ಪುನರುಜ್ಜೀವನ ಪ್ರಾಧಿಕಾರ ರಚಿಸಲಾಯಿತು.

      ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರೀಯ ಗಂಗಾ ಸಮಿತಿ ಆರಂಭವಾಗಿದ್ದು, 2016ರ ಅಕ್ಟೋಬರ್‍ನಿಂದ ಇಲ್ಲಿಯವರೆಗೂ ಒಂದು ಬಾರಿಯೂ ಸಭೆ ಸೇರಿಲ್ಲ.ಅತಿ ಹೆಚ್ಚಿನ ಪ್ರಚಾರ ನೀಡಿ ಆರಂಭಿಸಿದ್ದ ಮಹತ್ವಕಾಂಕ್ಷೆಯ ಗಂಗಾ ಶುದ್ಧೀಕರಣ ಯೋಜನೆ ವಿಫಲವಾಗಿದೆ ಎಂಬುದು ಲೋಕಸಭಾ ಚುನಾವಣಾ ಪೂರ್ವದಲ್ಲಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.

      ಗಂಗಾಸಚಿವಾಲಯವು ನದಿ ಶುದ್ಧೀಕರಣ ಹಾಗೂ ಸಮರ್ಥನೀಯ ನಿರ್ವಹಣೆಗೆ ರಾಷ್ಟ್ರ,ರಾಜ್ಯ ಹಾಗೂ ಜಿಲ್ಲೆ ಮಟ್ಟಗಳಲ್ಲಿ 5 ಹಂತಗಳನ್ನು ಗುರುತಿಸಿತ್ತು. ನಮಾಮಿ ಗಂಗೆ ಯೋಜನೆಯಲ್ಲಿ ಕೆಲವು ಪ್ರಗತಿ ಕಂಡುಬಂದಿದ್ದರೂ ಎನ್‍ಜಿಸಿಯೂ ಒಮ್ಮೆಯೂ ಸಭೆ ಸೇರಿಲ್ಲ ಹಾಗೂ ಪರಿಶೀಲನೆ ಸಹ ನಡೆಸಿಲ್ಲ ಎಂಬುದು ವರದಿಯಾಗಿದೆ.

       ಎನ್‍ಎಂಸಿಜಿಯ ವೆಬ್‍ಸೈಟ್‍ನಲ್ಲಿ ನದಿ ಶುದ್ಧತೆಯ ಕಾರ್ಯಪಡೆಯ ಪ್ರಗತಿ ಹಾಗೂ ಸಭೆ ನಡೆಸಿದರ ಬಗ್ಗೆ ಯಾವುದೇ ವಿವರ ಲಭ್ಯವಿಲ್ಲ. ಇದರ ಮಧ್ಯೆಯೂ ಎನ್‍ಎಂಸಿಜಿಯ ಕಾರ್ಯಕಾರಿ ಸಮಿತಿ ಸಭೆಯು ಮಾರ್ಚ್ 8ರಂದು ಜರುಗಿದ್ದರೂ ಯಾವುದೇ ರೀತಿಯಲ್ಲೂ ಫಲಪ್ರದವಾಗಿಲ್ಲ.

       ಉದ್ದೇಶಿತ ಯೋಜನಾ ಅನುಷ್ಠಾನವು ನಿರಾಶಾದಾಯಕವಾಗಿದೆ ಎಂದು 2017ರ ಡಿಸೆಂಬರ್‍ನಲ್ಲಿ ಸಿಎಜಿ ವರದಿ ನೀಡಿ, ವಿಳಂಬ ಹಾಗೂ ವಿಫಲವಾದ ಅಂಶಗಳನ್ನು ಉಲ್ಲೇಖಿಸಿತ್ತು. ಅದರ ಅನ್ವಯ; ನದಿ ಶುದ್ಧೀಕರಣ, ಒಳಚರಂಡಿ ಸಂಸ್ಕರಣಾ ಘಟಕಗಳ ನಿರ್ಮಾಣ ಹಾಗೂ ನದಿ ಪಾತ್ರದ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಚುರುಕಿನಿಂದ ಕೂಡಿಲ್ಲ ಎಂದಿತ್ತು.

       ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದಲ್ಲಿ ಗಂಗಾ ನದಿ ಹಾದುಹೋಗುವ 39 ಸ್ಥಳಗಳಲ್ಲಿ 2018ರ ಮಾನ್ಸೂನ್ ಬಳಿಕ ಒಂದು ಪ್ರದೇಶ ಮಾತ್ರವೇ ಶುದ್ಧವಾಗಿದೆ ಎಂದು ತಿಳಿಸಿತ್ತು.ಸಂಸತ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸರ್ಕಾರ,ನಮಾಮಿ ಗಂಗೆ ಅಭಿಯಾನದ ಅನುಮೋದಿತ 131 ಚರಂಡಿ ಸಂಸ್ಕರಣೆ ಯೋಜನೆಯಲ್ಲಿ 2018ರ ನವೆಂಬರ್ 30ರವರೆಗೆ 31 ಯೋಜನೆಗಳನ್ನು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿತ್ತು.ಕೋಟ್ಯಂತರ ಜನ, ಜಲಚರ, ಸಸ್ಯ ಹಾಗೂ ಪ್ರಾಣಿ ಸಂಕುಲದ ಜೀವನಾಡಿಯಾದ ಗಂಗಾ ಶುದ್ಧೀಕರಣ ಯೋಜನೆ ಯಶಸ್ವಿಗೊಳಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಪರಿಸರವಾದಿಗಳು ಆಪಾದಿಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here