ಗಾಯತ್ರಿಮಂತ್ರ ಕಡ್ಡಾಯವಲ್ಲ ಎಂದ ಉ.ದೆಹಲಿ ಪಾಲಿಕೆ

0
29

ದೆಹಲಿ: 

ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ ಒಂದು ಜಾತಿಯನ್ನು ತಾನು ಮಾಡುವುದಿಲ್ಲ ಎಂಬ ವಿಷಯವನ್ನು ಮಾಡು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಆದರೆ  ದೆಹಲಿಯ ಪಾಲಿಕೆ ಶಾಲೆಗಳಲ್ಲಿ, ಬೆಳಗ್ಗಿನ ಪ್ರಾರ್ಥನೆ ಸಂದರ್ಭ ಗಾಯತ್ರಿ ಮಂತ್ರವನ್ನು ಮಕ್ಕಳ ಬಾಯಲ್ಲಿ ಭಜಿಸುವಂತೆ ಅಲ್ಲಿನ ಉತ್ತರ ಪಾಲಿಕೆ ಹೊರಡಿಸಿದ್ದ ಸುತ್ತೋಲೆಯನ್ನು ಅಲ್ಪ ಸಂಖ್ಯಾತರ ಆಯೋಗ ವಿರೋಧಿಸಿ ನೋಟಿಸ್‌ ಜಾರಿ ಮಾಡಿದೆ.

ಉತ್ತರ ದೆಹಲಿ ಮುನ್ಸಿಪಲ್‌ ಆಯೋಗಕ್ಕೆ ನೋಟೀಸ್  ನೀಡಲಾಗಿದೆ ಎಂದು ಅಲ್ಪಸಂಖ್ಯಾರ ಆಯೋಗದ ಚೇರ್ಮನ್‌ ಝಫರುಲ್‌ ಇಸ್ಲಾಂ ಖಾನ್‌ ತಿಳಿಸಿದ್ದಾರೆ.  ಈ ಮೂಲಕ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಹಾಗು ಶಿಕ್ಷಕರಲ್ಲಿ ಕೀಳರಿಮೆ ಉಂಟಾಗುತ್ತದೆ” ಎಂದು ನೊಟೀಸ್‌ನಲ್ಲಿ ಹೇಳಲಾಗಿದೆ.

ಬೆಳ್ಳಗ್ಗಿನ ವೇಳೆ ಶಾಲಾ ಅಂಗಳದಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ಗಾಯತ್ರಿ ಮಂತ್ರ ಭಜಿಸುವುದನ್ನು ಕಡ್ಡಾಯ ಮಾಡಲಾಗಿತ್ತು . ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವ ಪಾಲಿಕೆ , ಗಾಯತ್ರಿ ಮಂತ್ರ ಭಜನೆ ಕಡ್ಡಾಯವಲ್ಲ ಎಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ 765 ಶಾಲೆಗಳಿದ್ದು 2.2 ಲಕ್ಷ ವಿದ್ಯಾರ್ಥಿಗಳಿದ್ದಾರೆ.ಶಾಲೆಗಳಲ್ಲಿ ಬೆಳಗ್ಗಿನ ವೇಳೆ ರಾಷ್ಟ್ರಗೀತೆ, ಗಾಯತ್ರಿ ಮಂತ್ರಗಳಲ್ಲದೇ ರಾಷ್ಟ್ರಘೋಷಗಳನ್ನು ಮೊಳಗಿಸಲು ಸೂಚನೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here