ಹೊಸ ಬೈಕ್ ಬಿಡುಗಡೆಗೆ ಸಜ್ಜಾದ ಹೊಂಡ ಕಂಪನಿ…!

ನವದೆಹಲಿ

    ಹೊಸ ಮೋಟಾರ್ ಸೈಕಲ್ ಮಾರುಕಟ್ಟೆಗೆ ತರಲು ಹೋಂಡಾ ಸಿದ್ಧತೆ ನಡೆಸಿದೆ. ಈಗಾಗಲೇ ಹೋಂಡಾ ಕಂಪನಿಯು ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಒಳ್ಳೆಯ ಹಿಡಿತವನ್ನುಹೊಂದಿದ್ದು, ಬೈಕ್ ಅಲ್ಲದೆ ಸ್ಕೂಟರ್ ವಿಭಾಗದಲ್ಲೂ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮತ್ತು ಗ್ರಾಮೀಣ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಹೋಂಡಾ ಹೊಸ ಬೈಕ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಪ್ರಮುಖ ವಿಚಾರ ಏನಪ್ಪಾ ಅಂದ್ರೆ ಈ ಹೊಸ ಹೋಂಡಾ ಬೈಕ್‌ ತುಂಬಾ ಅಗ್ಗವಾಗಿರಲಿದೆ.

    ಹೋಂಡಾದ ಹೊಸ ಬೈಕು ಅದರ ಸಿಡಿ 110 ವ್ಯಾಪ್ತಿಯಲ್ಲಿರುತ್ತದೆ. ಪ್ರಸ್ತುತ, ಸಿಡಿ 110 ಶ್ರೇಣಿಯು ಕಂಪನಿಯ ಅತ್ಯಂತ ಬೇಡಿಕೆಯ  ಬೈಕುಗಳಲ್ಲಿ ಒಂದಾಗಿದೆ. ಇಂತಹ ವೇಳೆಯಲ್ಲಿ ಹೋಂಡಾದ ಹೊಸ ಮೋಟಾರ್‌ ಸೈಕಲ್ ಬೆಲೆ 60 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಬಹುದು.

   ಹೀರೋ ಸ್ಪ್ಲೆಂಡರ್, ಟಿವಿಎಸ್ ರೇಡಿಯನ್, ಬಜಾಜ್ ಸಿಟಿ 100, ಟಿವಿಎಸ್ ವಿಕ್ಟರ್‌ಗೆ ಹೋಲಿಸಿದರೆ ಹೋಂಡಾದ ಹೊಸ ಬೈಕು ಕಡಿಮೆಗೆ ಸಿಗಬಹುದು ಎನ್ನಲಾಗಿದೆ. ಹೆಚ್ಚಿನ ಗ್ರಾಹಕರನ್ನು ಪಡೆಯಲು ಕಂಪನಿಯು ತನ್ನ ಈ ಹೊಸ ಬೈಕ್‌ ಅನ್ನು ಗುರಿಯಾಗಿರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link