ಗುಜರಾತ್:

ಕೇವಲ ಪ್ರದೇಶಗಳ ಹೆಸರು ಬದಲಾಯಿಸುವುದರಿಂದ ಭಾರತ ಶ್ರೀಮಂತವಾಗುವುದಾದರೆ ಇಡೀ ದೇಶದ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳಿತು ಎಂದು ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಹೇಳುವ ಮೂಲಕ ಅಣಕವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೈಜಾಬಾದನ್ನು ಅಯೋಧ್ಯೆ ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದ ಕಾರಣಕ್ಕೆ ದೇಶ ುದ್ದಾರವಾದಂತಲ್ಲ ಎಂದು ಯೋಗಿ ಸರಕಾರವನ್ನು ಲೇವಡಿ ಮಾಡಿದ್ದಾರೆ. ನಗರಗಳ ಹೆಸರನ್ನು ಬದಲಾಯಿಸುವ ಮೂಲಕ ದೇಶವನ್ನು ಚಿನ್ನದ ಹಕ್ಕಿಯನ್ನಾಗಿ ಮಾಡಬಹುದು ಎಂದು ನೀವು ಭಾವಿಸುವುದಾದರೆ ದೇಶದ ಎಲ್ಲ 125 ಕೋಟಿ ಜನರ ಹೆಸರನ್ನು ರಾಮನೆಂದು ಬದಲಾಯಿಸಿ’ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
