ಕೊರೋನಾ ನಿಯಮ ಪಾಲಿಸಿದರೂ ಬಂದ್ ಆದ ಕೇರಳದ ಪ್ರಸಿದ್ಧ ದೇವಾಲಯ…!

ತಿರುವನಂತಪುರ:

      ಕೇರಳದ ಪ್ರಸಿದ್ಧ ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತು ಅತ್ಯಂತ ಪ್ರಸಿದ್ಧವು ಆದ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾರ್ಚ್ ಕೊನೆಯ ವಾರದಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ ಇದೀಗ ದೇವಾಲಯದ ಪ್ರಧಾನ ಅರ್ಚಕ ಸೇರಿದಂತೆ 10 ಮಂದಿಗೆ ಕರೊನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ದೇವಾಲಯವನ್ನು ಸಾರ್ವಜನಿಕರಿಗಾಗಿ ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

      ಪದ್ಮನಾಭಸ್ವಾಮಿ ದೇಗುಲದ ಇಬ್ಬರು ಮುಖ್ಯ ಅರ್ಚಕರು ಹಾಗೂ 8 ಸಹಾಯಕ ಅರ್ಚಕರು, ಇಬ್ಬರು ಕಾವಲುಗಾರರಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅಕ್ಟೋಬರ್‌ 15ರವರೆಗೆ ದೇಗುಲ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ಹೇಳಿದೆ.

      ಅರ್ಚಕರಿಗೂ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸದ್ಯ ಪದ್ಮನಾಭಸ್ವಾಮಿ ದೇಗುಲದ ದೈನಂದಿನ ಪೂಜೆಯನ್ನು ತಂತ್ರಿಗಳು ನೆರವೇರಸಲಿದ್ದಾರೆ. ಆದರೆ, ಭಕ್ತರಿಗೆ ದೇಗುಲದ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ‘ದರ್ಶನ’ಕ್ಕೆ ಅವಕಾಶ ವಿರುವುದಿಲ್ಲ ಎಂದು ದೇವಸ್ಥಾನದ ಕಾರ್ಯಕಾರಿ ರಥೀಶನ್ ಐಎಎಸ್ ತಿಳಿಸಿದ್ದಾರೆ.

      ಮಾಸ್ಕ್ ಧರಿಸುವುದು, ಕೈ ನೈರ್ಮಲ್ಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಡ್ಡಾಯವಾಗಿ ಧರಿಸುವುದರ ಜತೆಗೆ, ದಿನವೊಂದಕ್ಕೆ ಮತ್ತು ನಿರ್ದಿಷ್ಟ ಸಮಯದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೇವಾಲಯಕ್ಕೆ ಅನುಮತಿಯನ್ನು ನೀಡಲಾಗಿತ್ತು. ಭಕ್ತರು ವಿಗ್ರಹ, ಗೋಡೆ ಅಥವಾ ಇತರ ಯಾವುದೇ ಮೇಲ್ಮೈಗಳನ್ನು ಮುಟ್ಟುವುದಕ್ಕೆ ಅವಕಾಶ ನೀಡಿರಲಿಲ್ಲ. ಈ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿತ್ತು. ಆದರೂ ಇದೀಗ ಕರೊನಾ ವೈರಸ್‌ ಬಂದಿರುವುದಾಗಿ ಹೇಳಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap