ಕಹಿ ಅರಗಿಸಿಕೊಳ್ಳುವುದನ್ನು ಕಲಿಯಿರಿ : ಸುಬ್ರಮಣ್ಯನ್ ಸ್ವಾಮಿ

ನವದೆಹಲಿ:

      ಕೆಲ ದಿನಗಳಿಂದ ದೇಶದ ಆರ್ಥಿಕ ಪರಿಸ್ಥಿಇತಿಯ ಬಗ್ಗೆ ಅರಿವಿದ್ದರೆ ಅದನ್ನು ಮೇಲೆತ್ತುವ ಮನಸ್ಸಿದ್ದರೆ ಮೊದಲು ಕಹಿ ಸತ್ಯವನ್ನು ಕೇಳಿ ಅರಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ ಮತ್ತು ನಿಮ್ಮ ಸರ್ಕಾರದ ಅರ್ಥಶಾಸ್ತ್ರಜ್ಞರನ್ನು ಹೆದರಿಸುವುದನ್ನು ನಿಲ್ಲಿಸಿ ಎಂದು ಸುಬ್ರಹ್ಮಣಿಯನ್ ಸ್ವಾಮಿ ಅವರು ಸಲಹೆ ನೀಡಿದ್ದಾರೆ.

     ಮೋದಿ ಸರ್ಕಾರ ನಡೆಸುವ ವಿಧಾನವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಈ ಸರ್ಕಾರದಲ್ಲಿ ಕೆಲವೇ ಕೆಲವರು ಮಾತ್ರ ಔಟ್​ ಆಫ್​ ದಿ ಲೈನ್ ಬಂದು ಅನಿಸಿದ್ದನ್ನು ಹೇಳಬಹುದಾಗಿದೆ ಎಂದಿದ್ದಾರೆ.ಮೋದಿಯವರೇ ನೀವು ಈ ರೀತಿ ಮಾಡಬಾರದು ಅಂತಾ ತಮಗೆ ನೇರವಾಗಿ ಹೇಳುವಂತೆ ಇತರರಿಗೆ ಪ್ರಧಾನಿ ಪ್ರೋತ್ಸಾಹಿಸಬೇಕು. ಆದರೆ ಈ ಮನೋಭಾವವನ್ನು ಮೋದಿ ಬೆಳೆಸಿಕೊಂಡಿಲ್ಲ ಅಂತ ನನಗನಿಸುತ್ತೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

     ಆರ್ಥಿಕ ಬಿಕ್ಕಟ್ಟಿಗೆ ನೋಟು ಅಮಾನ್ಯೀಕರಣ, ವಿಶೇಷವಾಗಿ ಇದರಲ್ಲಿ ಆರ್ ಬಿಐ ಪಾತ್ರ ಮತ್ತು ಹಣಕಾಸುವ ಸಚಿವಾಲಯ ಕಾರಣ. ಅಲ್ಲದೆ ಜಿಎಸ್ ಟಿಯನ್ನು ಸರಿಯಾಗಿ ಜಾರಿಗೊಳಿಸಲು ವಿಫಲವಾಗಿದ್ದೆ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎಂದು ಸ್ವಾಮಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link