ಚಂಡೀಗಢ:
ಉಪನ್ಯಾಸಕರು ಸಾಮಾನ್ಯವಾಗಿ ಕ್ಲಾಸ್ನಲ್ಲಿ ಪಾಠ ಮಾಡುತ್ತಾರೆ ಗಣಿತ ಶಸ್ತ್ರದ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಯರಿಗೆ ಪ್ರೇಮ ಪಾಠ ಮಾಡಿದ್ದಾನೆ.
ನಗರದ ಕರ್ನಾಲ್‍ನ ಮಹಿಳಾ ಕಾಲೇಜಿನ ಚರಣ್ ಸಿಂಗ್ ಅಮಾನತುಗೊಂಡಿರುವ ಉಪನ್ಯಾಸಕ. ಚರಣ್ ಕ್ಲಾಸಿನಲ್ಲಿ ಪ್ರೀತಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ಅದನ್ನು ವಿಡಿಯೋ ಮಾಡಿ ಪ್ರಿನ್ಸಿಪಾಲ್‍ಗೆ ತೋರಿಸಿದ್ದಾಳೆ. ಈ ವಿಡಿಯೋ ನೋಡಿದ ತಕ್ಷಣ ಪ್ರಿನ್ಸಿಪಾಲ್ ಉಪನ್ಯಾಸಕನನ್ನು ಸಸ್ಪೆಂಡ್ ಮಾಡಿದ್ದಾರೆ. ಉಪನ್ಯಾಸಕನ ಪ್ರೀತಿ ಪಾಠದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ????
ವಿದ್ಯಾರ್ಥಿನಿಯರಿಗೆ ಬೋರ್ಡ್ ಮೇಲೆ ಪ್ರೀತಿಯ ಮೂರು ಸೂತ್ರ ಹೇಳಿಕೊಟ್ಟಿದ್ದಾನೆ. ಮೊದಲನೇ ಸೂತ್ರ ” ಕ್ಲೋಸ್ನೆಸ್- ಅಟ್ರ್ಯಾಕ್ಷನ್ = ಫ್ರೆಂಡ್‍ಶಿಪ್”, ಎರಡನೇ ಸೂತ್ರ ” ಕ್ಲೋಸ್ನೆಸ್ + ಅಟ್ರ್ಯಾಕ್ಷನ್ = ರೊಮ್ಯಾಂಟಿಕ್ ಲವ್” ಹಾಗೂ ಮೂರನೇ ಫಾರ್ಮೂಲಾ “ಅಟ್ರ್ಯಾಕ್ಷನ್ – ಕ್ಲೋಸ್ನೆಸ್ = ಕ್ರಶ್” ಎಂದು ಉಪನ್ಯಾಸಕ ಪ್ರೀತಿ ಪಾಠ ಮಾಡಿದ್ದಾನೆ.
ಈ ಮೂರು ಸೂತ್ರಗಳನ್ನು ಉಪನ್ಯಾಸಕ ಹಿಂದಿಯಲ್ಲಿ ಹೇಳಿಕೊಟ್ಟಿದ್ದಾನೆ. ಸೂತ್ರದ ಪ್ರತಿಯೊಂದು ಪದವನ್ನು ವಿದ್ಯಾರ್ಥಿನಿಯರಿಗೆ ವಿವರಿಸಿದ್ದಾರೆ. ಅಲ್ಲದೇ ಮದುವೆಯಾದ ಮೇಲೆ ಪತಿ – ಪತ್ನಿಯ ವೃದ್ಧರಾದ ನಂತರ ಅವರ ನಡುವೆ ಆಕರ್ಷಣೆ ಕಡಿಮೆ ಆಗುತ್ತೆ. ಬಳಿಕ ಅವರು ಕೇವಲ ಸ್ನೇಹಿತರಾಗಿ ಇರುತ್ತಾರೆ ಎಂದು ಕ್ಲಾಸಿನಲ್ಲಿ ವಿವರಿಸಿದ್ದಾನೆ. ಪ್ರೀತಿ ಪಾಠ ಕೇಳಿದ ವಿದ್ಯಾರ್ಥಿನಿಯರು ಜೋರಾಗಿ ನಗುತ್ತಾ ‘ಯೆಸ್’ ಸಾರ್ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








