ಮುಂಬೈ:
ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾದ ರಾಮ್ ಗೋಪಾಲ್ ವರ್ಮಾ ಅವರು ಪಾಪಿ ಪಾಕಿಸ್ತಾನಕ್ಕೆ ಮತ್ತು ಅದರ ಪ್ರಧಾನಿಗೆ ಇಬ್ಬರಿಗೂ ಸರಿಯಾದ ಟಾಂಗ್ ನೀಡಿದ್ದಾರೆ
ನೀವುಗಳು ಬರೀ ಮಾತುಕತೆಯಿಂದಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಯುವುದಾದರೆ ನೀವೇಕೆ ಮೂರು ಸಲ ಮದುವೆಯಾದಿರಿ ಎಂದು ಇಮ್ರಾನ್ ಖಾನ್ ಅವರನ್ನು ಕುಟುಕುವ ಮೂಲಕ ಪ್ರಶ್ನಿಸಿದ್ದಾರೆ.
ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಈ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಮಾತುಕತೆಯಿಂದಲೇ ಎಲ್ಲ ಸಮಸ್ಯೆ ಪರಿಹಾರವಾಗುತ್ತದೆ. ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಖಂಡಿತಾ ಪಾಕಿಸ್ತಾನ ಕೂಡ ಪ್ರತಿದಾಳಿ ಮಾಡುತ್ತದೆ ಎಂದು ಹೇಳಿದ್ದರು.
Dear Prime Minister @ImranKhanPTI
Can you please educate us dumb Indians on how to have dialogue with a man rushing at you to explode tons of RDX on you ..And ofcourse we all Indians will pay you, your tuition fee Teacher— Ram Gopal Varma (@RGVzoomin) February 20, 2019
ಅವರ ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ತಮ್ಮದೇ ಆದ ಧಾಟಿಯಲ್ಲಿ ಇಮ್ರಾನ್ ಖಾನ್ ಅವರ ಕಾಲೆಳೆದಿದ್ದಾರೆ. 350 ಕೆಜಿ ತೂಕದ ಬಾಂಬ್ ಹೊತ್ತು ದಾಳಿಗೆ ಆಗಮಿಸುವ ಉಗ್ರನೊಂದಿಗೆ ಹೇಗೆ ಮಾತುಕತೆ ನಡೆಸಬೇಕು ಮತ್ತು ಆ ಮೂಲಕ ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಮೂಕ ಭಾರತೀಯರಿಗೆ ತಿಳಿದಿಲ್ಲ. ದಯಮಾಡಿ ನೀವು ಹೇಳಿಕೊಡಿ. ಬೇಕಿದ್ದರೆ ನಿಮಗೆ ಟ್ಯೂಷನ್ ಫೀಸ್ ಅನ್ನೂ ಕೊಡುತ್ತೇವೆ ಎಂದು ವ್ಯಂಗ್ಯವಾಗಿಯೇ ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








