ಲಕ್ನೋ:
ದೆಹಲಿಯಲ್ಲಿ ನಡೆಯುತ್ತಿರುವ ಗಲಭೆ ವೇಳೆ ಪೊಲೀಸರಿಗೆ ಪಿಸ್ತೂಲ್ ತೋರಿಸಿದ್ದ ಶಾರೂಕ್ ಖಾನ್ ಬಂಧಿಸಲಾಗಿದೆ. ಶಾರೂಕ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಂಗಳವಾರ ಉತ್ತರ ಪ್ರದೇಶದ ಬರೇಲಿಯಲ್ಲಿ ದೆಹಲಿ ಪೊಲೀಸರು ಶಾರೂಕ್ ಖಾನ್ ಬಂಧಿಸಿದ್ದಾರೆ. 8 ದಿನಗಳ ಬಳಿಕ ಆರೋಪಿ ಬಂಧನವಾಗಿದ್ದು, ದೆಹಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ದೆಹಲಿಯ ನಿವಾಸಿಯಾದ ಆತ ತಲೆಮರೆಸಿಕೊಂಡಿದ್ದ.
33 ವರ್ಷದ ಶಾರೂಕ್ ಖಾನ್ ದೆಹಲಿಯ ಜರ್ಫಾಬಾದ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟ ನಡೆಯುವಾಗ ಪೊಲೀಸರಿಗೆ ಪಿಸ್ತೂಲ್ ತೋರಿಸಿದ್ದ. ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು .ಫೆಬ್ರವರಿ 24ರಂದು ದೆಹಲಿಯಲ್ಲಿ ಗಲಭೆ ನಡೆಯುವಾಗ ಶಾರೂಕ್ ಖಾನ್ ಕಂಟ್ರಿ ಮೇಡ್ ಪಿಸ್ತೂಲ್ ಹಿಡಿದು ರಸ್ತೆಗೆ ಇಳಿದಿದ್ದ. ಪೊಲೀಸರು ಎದರು ಬಂದರೂ ಅವರಿಗೆ ಪಿಸ್ತೂಲ್ ತೋರಿಸಿದ್ದ, ಬಳಿಕ ಖಾಲಿ ಜಾಗಕ್ಕೆ ಗುಂಡು ಹಾರಿಸಲು ಪ್ರಯತ್ನ ನಡೆಸಿದ್ದ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
