ಪಾಟ್ನಾ:
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 50 ಸ್ಥಾನಗಳಲ್ಲಿ ಶಿವಸೇನಾ ಸ್ಪರ್ಧಿಸಲಿದೆ ಎಂದು ಪಕ್ಷದ ಸಂಸದ ಅನಿಲ್ ದೇಸಾಯಿ ಭಾನುವಾರ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಅಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಸ್ವತಂತ್ರವಾಗಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದ್ದು, ಕಹಳೆ ಪಕ್ಷದ ಸಂಕೇತವಾಗಿರುತ್ತದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಹಾರದಲ್ಲಿ ಚುನಾವಣಾ ಪ್ರಚಾರದ ಬಗ್ಗೆ ಪಕ್ಷ ಮಾಹಿತಿ ನೀಡಲಿದೆ ಎಂದರು.ಬಿಹಾರದಲ್ಲಿ ಪ್ರಚಾರ ನಡೆಸಲಿರುವ 22 ನಾಯಕರ ಪಟ್ಟಿಯನ್ನು ಶಿವಸೇನಾ ಗುರುವಾರ ಬಿಡುಗಡೆ ಮಾಡಿತ್ತು.ಉದ್ಧವ್ ಠಾಕ್ರೆ , ಅವರ ಮಗ ಆದಿತ್ಯ ಠಾಕ್ರೆ ಕೂಡಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.