ಸಿಧುರನ್ನು ಎನ್ ಎಸ್ ಎ ಅಡಿ ಬಂಧಿಸಿ : ಸ್ವಾಮಿ

ನವದೆಹಲಿ:
        ಪ್ರಸಿದ್ಧ ,ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ರಾಜ್ಯ ಹಾಲಿ ಸಚಿವರೂ ಆಗಿರುವ ಸಿಧು ಅವರು ಇತ್ತೀಚೆಗೆ ತಮ್ಮ ವಿಶ್ವಾಸವನ್ನು ಪಾಕೀಸ್ತಾನ ಮತ್ತು ಖಲಿಸ್ತಾನಕ್ಕೆ ತೋರಿಸುತ್ತಿರುವುದು ಕಳವಳಕಾರಿ ವಿಷಯವಾಗಿದೆ ಮತ್ತೋಂದು ಬೆಳವಣಿಗೆಯಲ್ಲಿ ಅವರು ಖಲಿಸ್ತಾನ್ ಉಗ್ರ ಸಂಘಟನೆಯ ಮುಖಂಡನೊಂದಿಗೆ ತೆಗೆಸಿಕೊಂಡಂತಹ ಫೋಟೋ ನವಜೋತ್ ಸಿಂಗ್ ಸಿಧುಗೆ ಉರುಳಾಗಿದೆ ಅವರ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಇಂದು ತೀವ್ರವಾಗಿ ಅಸಮಾಧಾನಗೊಂಡು ಕಿಡಿಕಾರಿದ್ದಾರೆ . ನವಜೋತ್ ಸಿಧು ಅವರನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ,
        ರಾಷ್ಟ್ರೀಯ ತನಿಖಾ ದಳ ಈ ಕುರಿತು ತನಿಖೆ ನಡೆಸಬೇಕೆಂದು ಸುಬ್ರಮಣಿಯನ್ ಸ್ವಾಮಿಯವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಧು ಗೋಪಾಲ್ ಚಾವ್ಲಾ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಇದಕ್ಕೆ ತೆರೆ ಎಳೆಯುವ ಕಸರತ್ತು ಮಾಡಿದ್ದಾರೆ ಜೋತೆಗೆ ಖಲಿಸ್ತಾನಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ೆಂದು ಸಮರ್ಥಿಸಿಕೊಂಡಿದ್ದಾರೆ.   
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link