ಗುರುದಾಸ್ಪುರ: 

ಒಂದು ಕಾಲದ ಅವಿಭಾಜ್ಯ ಅಂಗಗಳಾಗಿದ್ದ ಭಾರತ ಹಾಗೂ ಪಾಕಿಸ್ತಾನ ಇತ್ತೀಚೆಗೆ ವಿಭಾಗವಾದರು ಇವೆರಡರ ನಡುವೆ ಸೇತುವೆ ತರ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸೋಮವಾರ ಶಂಕುಸ್ಥಾಪನೆ ಮಾಡಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿರುವ ಅಮರೀಂದರ್ ಸಿಂಗ್ ಪಾಕಿಸ್ತಾನ ಸೇನಾ ಮುಖ್ಯಸ್ಥರಿಗೆ ಒಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಒಬ್ಬ ಸೇನಾ ಯೋಧನಾಗಿ, ಯಾವ ಸೇನೆ ಕದನ ವಿರಾಮ ಉಲ್ಲಂಘನೆ ಮಾಡುವಂತೆ ಹೇಳಿಕೊಡುತ್ತದೆ? ಇತರೆ ದೇಶದ ಯೋಧನನ್ನು ಹತ್ಯೆ ಮಾಡುವಂತೆ ಹೇಳುತ್ತದೆ? ಪಠಾಣ್ ಕೋಟ್ ಹಾಗೂ ಅಮೃತಸರದ ಮೇಲೆ ದಾಳಿ ಮಾಡುವಂತೆ ಯಾವ ಸೇನೆ ಜನರನ್ನು ಕಳುಹಿಸುತ್ತದೆ ಎಂದು ಕೇಳಿದ್ದಾರೆ.
ನಂತರ ಮಾತನಾಡಿದ ವೆಂಕಯ್ಯ ನಾಯ್ಡು ಅಮರೀಂದರ್ ಸಿಂಗ್ ಹೇಳಿದ್ದನ್ನೇ ನಾನು ಸಮರ್ಥಿಸುತ್ತೇನೆ. ಇನ್ನು ಉಗ್ರರು ಭಾರತ ಪ್ರವೇಶಿಸಲು ಹಾಗೂ ಮುಗ್ಧರನ್ನು ಹತ್ಯೆ ಮಾಡಲು ನಾವು ಬಿಡುವುದಿಲ್ಲ.ಒಂದು ದೇಶದೊಂದಿಗೆ ವ್ಯವಹರಿಸುವ ದಾರಿ ಇದಲ್ಲ. ಇದನ್ನು ಪಾಕಿಸ್ತಾನ ಅರಿತರೆ ಸಂಬಂಧ ಚೆನ್ನಾಗಿರುತ್ತದೆ. ಉಭಯ ರಾಷ್ಟ್ರಗಳ ಸಂಬಂಧ ಸುಧಾರಿಸಲು ಈ ಕಾರ್ಯಕ್ರಮದ ಮೂಲಕವೇ ಆರಂಭಿಸೋಣ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
