ನವದೆಹಲಿ:
ರಾಮದೇವ್ ಬಾಬಾ ಅವರು ಹೇಳುವ ಪ್ರಕಾರ ಮೋದಿ ಅವರ ಮುಂದಾಳತ್ವ ಹಾಗೂ ಆಡಳಿತ ನೀತಿಯ ಬಗ್ಗೆ ಯಾವುದೇ ರೀತಿಯ ಅನುಮಾನವೇ ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ ಮತ್ತು ಮೋದಿ ಪರ ಬ್ಯಾಟಿಂಗ್ ಮಾಡುವ ಮೂಲಕ ಮೋದಿ ಪ್ರಶ್ನಾತೀತ ನಾಯಕ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಮಾತ್ರಕ್ಕೆ ಮೋದಿ ಒಬ್ಬ ಕಳಪೆ ನಾಯಕ ಎಂದು ಜರಿಯುವವರಿಗೆ ತಾವು ಅಧಿಕಾರದಲ್ಲಿದಾಗ ಮಾಡಿದ ತಪ್ಪುಗಳನ್ನು ನೆಪಿಸಿಕೊಳ್ಳಿ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿರುವುದಲ್ಲದೇ , ಈಗ ಇರುವ ಜಿಡಿಪಿಗೂ ಆಗಿನ ಜಿಡಿಪಿಗೂ ತುಲನೆ ಮಾಡಿ ನೋಡಿ ಎಂದು ಹೇಳುವ ಮೂಲಕ ಮೋದಿಯವರಿಗೆ ನೈತಿಕ ಬೆಂಬಲ ನೀಡಿದ್ದಾರೆ.
ಭಾರತ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಮ್ ದೇವ್, ನರೇಂದ್ರ ಮೋದಿ ಬೇರೆಯವರ ರೀತಿ ಮತ ಬ್ಯಾಂಕ್ ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ ಅಲ್ಲದೇ ನೀವು ಮೋದಿ ಬಗ್ಗೆ ಮಾತನಾಡುವ ಮೊದಲು ನೀವು ಮಾಡಿದನ್ನು ಯೋಚಿಸಿ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








