ತಿರುಪತಿ:
ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ನೀಡುವ ಪ್ರಸಿದ್ದ ತಿರುಪತಿ ಲಡ್ಡು ಪ್ರಸಾದಕ್ಕೆ ಕೊಡುವ ಪಾಲಿಥಿನ್ ಕವರ್ಗಳ ಬದಲಿಗೆ ಶೀಘ್ರದಲ್ಲೇ ಕಾಗದದ ಬಾಕ್ಸ್ ಗಳಲ್ಲಿ ಪ್ರಸಾದ ನೀಡಲಾಗುವುದು ಎಂದು ಟ್ರಸ್ಟ್ ತನ್ನ ಅಧಿಕೃತವಾಗಿ ಅಲ್ಲಿನ ಸಿಇಓ ಮಾಧ್ಯಮವೊಂದಕ್ಕೆ ನೀಡದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಿರುಪತಿ ನಗರವು ಕವರ್, ಪ್ಲೇಟ್ ಮತ್ತು ಪ್ಲಾಸ್ಟಿಕ್ನಿಂದ ತಯಾರಿಸಿದ ಕಪ್ ಗಳನ್ನು ನಿಷೇಧಿಸಿ ಯಶಸ್ವಿಯಾಗಿರುವಾಗ, ತಿರುಮಲ ಪಟ್ಟಣವು ಈ ಬದಲಾವಣೆಯ ಭಾಗವಾಗಿರಲು ತನ್ನ ಮೊದಲ ಹೆಜ್ಜೆ ಇಡುತ್ತಿದೆ.
ಬಯೋ ಡೀಗ್ರೇಡೆಬಲ್ ಪ್ಲಾಸ್ಟಿಕ್ ಕವರ್ಗಳು ಮತ್ತು ಬಟ್ಟೆ ಅಥವಾ ಸೆಣಬಿನ ಚೀಲಗಳ ಪರಿಚಯ ಸೇರಿದಂತೆ ವಿವಿಧ ಆಯ್ಕೆಗಳನ್ನು ಪ್ರಯತ್ನಿಸಿದ ನಂತರ, ಟಿಟಿಡಿ ಕಾಗದದ ಪೆಟ್ಟಿಗೆಗಳಿಗೆ ಮೊರೆಹೊಗಿದೆ ಎಂದು ತಿಳಿದು ಬಂದಿದೆ.
ಇಂತಹುದೇ ಪೆಟ್ಟಿಗೆಗಳನ್ನು ಈಗಾಗಲೇ ಶ್ರೀಶೈಲಂ ದೇವಸ್ಥಾನದಲ್ಲಿ ಬಳಕೆ ಮಾಡುತ್ತಿದ್ದು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿರುಮಲದಲ್ಲಿ ಈ ಮಾದರಿಯನ್ನು ಬಳಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳುವ ಮೂಲಕ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ.
ಈ ಬಾಕ್ಸ್ ಗಳು ಮೂರು ಸಾಮರ್ಥ್ಯದಲ್ಲಿ ದೊರೆಯುವ ಸಾಧ್ಯತೆ ಇವೆ, ಬಾಕ್ಸ್ ನಲ್ಲಿರುವ ಲಡ್ಡುಗಳ ಸಂಖ್ಯೆಯ ಆಧಾರದ ಮೇಲೆ ಬಾಕ್ಸ್ ನೀಡುವ ಯೋಜನೆಯಿದೇ ಎಂದು ಅನಿಲ್ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
