ನವದೆಹಲಿ:
ಪ್ರಸಕ್ತ ದಿನಮಾನಗಳಲ್ಲಿ ತೀರಾ ಚರ್ಚೆಗೆ ಗ್ರಾಸವಾಗಿದ್ದ ಶ್ರೀರಾಮ ಮಂದಿರ ನಿರ್ಮಾಣದ ವಿಷಯವನ್ನು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುವ ಮೂಲಕ ಬಿಜೆಪಿ ಹಾಗು ಮಿತ್ರ ಪಕ್ಷಗಳು ಈ ವಿಷಯವನ್ನು ಚುನಾವಣಾ ಸರಕಾಗಿ ಉಪಯೋಗಿಸುತ್ತಿವೆ ಮತ್ತು ಹಿಂಧೂ ಪರ ಸಂಘಟನೆಗಳು ಕೇಂದ್ರದ ಮೇಲೆ ಒತ್ತಡ ಹೇರುವ ತಂತ್ರದಿಂದ ಜನರನ್ನು ಮರಳು ಮಾಡುತ್ತಿದ್ದಾರೆ.
ಆದರೆ,ಈ ಕೆಳ ಮಟ್ಟದ ತಂತ್ರದಿಂದ ರಾಷ್ಟ್ರದ ಜನರನ್ನು ಮರಳು ಮಾಡವುದು ಅಸಾಧ್ಯ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ನುಡಿಯುವ ಮೂಲಕ ಕಿಡಿಕಾರಿದ್ದಾರೆ .
ನಿಮ್ಮನ್ನು ಅಯೋಧ್ಯೆಗೆ ಭೇಟಿ ನೀಡದಂತೆ ತಡೆದದ್ದು ಯಾರು ಎಂದು ಪ್ರಶ್ನಿಸಿದ್ದಾರಲ್ಲದೇ ಮಲ್ಲಿಕಾರ್ಜುನ ಖರ್ಗೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಯೋಧ್ಯೆಗೆ ಭೇಟಿ ನೀಡಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಂದು ನಿಧನರಾದ ತಮ್ಮ ಚಿರಕಾಲದ ಸಹೋಧ್ಯೋಗಿ ಶ್ರೀ ಸಿ ಕೆ ಜಾಫರ್ ಷರೀಫ್ ಅವರ ನಿಧಕ್ಕೆ ಕಂಬನಿ ಮಿಡಿದಿದ್ದಾರೆ ದೇವರು ಅವರ ಆತ್ಮಕ್ಕೆ ಚಿರ ಶಾಂತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
