ಪ್ಯಾನ್ – ಆಧಾರ್ ಲಿಂಕ್ ಗಡುವು ವಿಸ್ತರಣೆ!!

ದೆಹಲಿ :

     ಕೇಂದ್ರಿಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆಧಾರ್ ಜೊತೆ ಪ್ಯಾನ್‌ ಕಾರ್ಡ್ ನ್ನು ಲಿಂಕ್ ಮಾಡುವ ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಣೆ ಮಾಡಿದೆ.

      ಪ್ಯಾನ್ ಆಧಾರ್ ಲಿಂಕ್ ಸಂಬಂಧಿಸಿದಂತೆ ಹಣಕಾಸು ಸಚಿವಾವಲಯ ಆದೇಶ ಹೊರಡಿಸಿದೆ. ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಸೆಪ್ಟೆಂಬರ್‌ 30ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಿಸಲು ಸೂಚಿಸಲಾಗಿತ್ತು. ಇದೀಗ ಪ್ಯಾನ್ – ಆಧಾರ್ ಲಿಂಕ್ ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಲಾಗಿದೆ.

      ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದರೆ ತೆರಿಗೆ ಪಾವತಿ, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕುಗಳುಂಟಾಗಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap