ಸಂಚಾರಿ ನಿಯಮ ಪಾಲಿಸದಿರುವವರಿಗೆ ಪೊಲೀಸರಿಂದ ಕೌನ್ಸಿಲಿಂಗ್

ಬೆಂಗಳೂರು: 

    ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರಿಗೆ ಪೊಲೀಸರು ಕೌನ್ಸಿಲಿಂಗ್ ಸೆಷನ್ಸ್ ಗಳನ್ನು ಪ್ರಾರಂಭಿಸಿದ್ದಾರೆ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದರ ಪ್ರಾಮುಖ್ಯತೆ ಮತ್ತು ಇತರ ಸುರಕ್ಷಿತ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಇದರ ಗುರಿಯಾಗಿದೆ.

    ಈ ಸೆಷನ್ಸ್ ಎರಡು ತಿಂಗಳ ಕಾಲ ನಡೆಯಲಿದ್ದು, ನವೆಂಬರ್ 1 ರಿಂದ ಹೆಲ್ಮೆಟ್ ಧರಿಸದವರನ್ನು ಗುರಿಯಾಗಿಸಲು ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಲಿದ್ದಾರೆ. ರಸ್ತೆ ಬಳಕೆದಾರರಲ್ಲಿ ದ್ವಿಚಕ್ರ ವಾಹನ ಸವಾರರ ಸಾವಿನ ಪ್ರಮಾಣ ಹೆಚ್ಚಿರುವುದರಿಂದ ಪೊಲೀಸರು ಈ ಉಪಕ್ರಮವನ್ನು ಕೈಗೊಂಡಿದ್ದಾರೆ.

    ರಾಜ್ಯದಲ್ಲಿ ಮಾರಣಾಂತಿಕ ಅಪಘಾತಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಹೆಲ್ಮೆಟ್ ಧರಿಸಬೇಕು ಎಂಬುದು ಜನರಿಗೆ ತಿಳಿದಿದೆ. ಆದರೆ ಹಾಗೆ ಮಾಡುತ್ತಿಲ್ಲ. ರಾಜ್ಯದಾದ್ಯಂತ, ಹೆಲ್ಮೆಟ್‌ಗಳ ಪ್ರಾಮುಖ್ಯತೆ ಮತ್ತು ಸುರಕ್ಷಿತ ಕ್ರಮಗಳ ಕುರಿತು ಅವರಿಗೆ ಶಿಕ್ಷಣ ನೀಡಲು ಪೊಲೀಸರು ಸೆಷನ್‌ಗಳನ್ನು ನಡೆಸುತ್ತಿದ್ದಾರೆ ಎಂದು ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ತಿಳಿಸಿದರು.

   ಸೆಷನ್ಸ್ ಗಳಲ್ಲಿ ಆಯಾ ವಿಭಾಗಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಿದ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಅಪಘಾತಗಳ ಡೇಟಾವನ್ನು ನೀಡಲಿವೆ. 2 ಎರಡು ತಿಂಗಳ ಕೌನ್ಸೆಲಿಂಗ್ ಅವಧಿ ನಂತರ, ನವೆಂಬರ್ 1 ರಿಂದ ಹೆದ್ದಾರಿಗಳಲ್ಲಿ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲು ಪೊಲೀಸರು ವಿಶೇಷ ಅಭಿಯಾನ ಆರಂಭಿಸುತ್ತಾರೆ. ಇತರೆ ಸಂಚಾರ ನಿಯಮ ಉಲ್ಲಂಘನೆಗಾಗಿ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸುವುದನ್ನು ಪೊಲೀಸರು ಮುಂದುವರಿಸುತ್ತಾರೆ ಎಂದು ಅವರು ಹೇಳಿದರು.

   ಈ ಕೌನ್ಸೆಲಿಂಗ್ ಸೆಷನ್ಸ್ ನಡೆಸಲು 1,000 ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅಧಿಕಾರಿಗಳು ಸುರಕ್ಷಿತ ಮತ್ತು ರಕ್ಷಣಾತ್ಮಕ ಚಾಲನಾ ತಂತ್ರಗಳನ್ನು ಕಲಿಸುತ್ತಾರೆ. ದ್ವಿಚಕ್ರ ವಾಹನ ಸವಾರರ ಜೊತೆಗೆ, ಟ್ರಕ್ ಚಾಲಕರು ಮತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಗೆ ಸಹ ಸೆಷನ್ಸ್ ಗಳು ಇರುತ್ತವೆ ಎಂದು ಅವರು ತಿಳಿಸಿದರು. 

   ಚಾಮರಾಜನಗರ ಎಸ್ಪಿ ಜಿ ಸಂಗೀತಾ ಮಾತನಾಡಿ, ಜಿಲ್ಲೆಯ 16 ಪೊಲೀಸ್ ಠಾಣೆಗಳಲ್ಲಿ ಪ್ರತಿ ವಾರ ಸರಾಸರಿ 150 ಜನರು ಸೆಷನ್ಸ್ ಗೆ ಹಾಜರಾಗುತ್ತಾರೆ. ಜಿಲ್ಲೆಯಲ್ಲಿ ಸಂಭವಿಸಿದ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಅಪಘಾತಗಳನ್ನು ತೋರಿಸುವ 30 ನಿಮಿಷಗಳ ವೀಡಿಯೊವನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಅಪಘಾತಗಳನ್ನು ತಡೆಗಟ್ಟಲು ಹೆಲ್ಮೆಟ್ ಧರಿಸುವುದು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದರ ಮಹತ್ವವನ್ನು ವೀಡಿಯೊ ಮೂಲಕ ತಿಳಿಸಲಾಗುತ್ತದೆ ಎಂದು ಅವರು ಹೇಳಿದರು.

Recent Articles

spot_img

Related Stories

Share via
Copy link
Powered by Social Snap