ಬೆಂಗಳೂರು:
ಕರ್ನಾಟಕ ಔಷಧ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿಗಳನ್ನು ಗುಣಮಟ್ಟವಲ್ಲದ ಕಾರಣ ನಿಷೇಧಿಸಿದ್ದಾರೆ.ಅದರಂತೆ ಇನ್ನು ಮುಂದೆ ಫೆಭ್ರೆಕ್ಸ್- 650 (ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ650 ಎಂಜಿ), ವೊಪ್ಲಾಕ್ಸ್ -ಓಜ್ಡ್ (ಓಪ್ಲೋಕ್ಸಾಸಿನ್ ಅಂಡ್ ಆರ್ನಿಡಾಜೋಲ್ ಟ್ಯಾಬ್ಲೆಟ್ಸ್), ಪ್ಯಾಂಟಫಾಸ್ಟ್ – ಡಿಎಸ್‍ಆರ್ ಕ್ಯಾಪ್ಸೂಲ್ಸ್ (ಪ್ಯಾಂಟೋಪ್ರಜೋಲ್ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಅಂಡ್ ಡೋಮ್ ಫೆರಿಡನ್ ಕ್ಯಾಪ್ಸೂಲ್ಸ್ ಐ.ಪಿ),
ಮದ್ಯ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ ಗಳಲ್ಲಿ ನೋ ಸ್ಟಾಕ್, ಇಂದೂ ಸಿಗೋಲ್ಲ ಎಣ್ಣೆ!
ಫೆನೈಲ್ಬು ಟಾಜೋನ್ ಅಂಡ್ ಸೋಡಿಯಂ ಸ್ಯಾಲಿಸಿಲೇಟ್ ಇನ್‍ಜೆಕ್ಷನ್ (ಸಲ್ಫೆನ್ ವೆಟರ್‍ನರಿ), ಎನ್ರೋಪ್ಲಾಕ್ಸಾಸಿನ್ ಬೋಲಸ್ (ವೆಟ್) ಫ್ಲೆಕ್ಸಿಕಾನ್, ಕಾಲ್ಸಾಪ್ ಕ್ಯಾಲ್ಸಿಯಂ ಸಿರಪ್ (ಕ್ಯಾಲ್ಸಿಯಂ ಗ್ಲಕೋನೆಟ್, ವಿಟಮಿನ್ ಡಿ3 ಅಂಡ್ ಸೈನೋಕೋಬಾಲಾಲ್ಮಿನ್ ಸಿರಪ್), ಜುಬಿಸೆಫ್ -200 ಎಲ್‍ಬಿ ಟ್ಯಾಬ್ಲೆಟ್ಸ್ (ಸೇಫಿಕ್ಸಿಂ ಅಂಡ್ ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಲಸ್ ಟ್ಯಾಬ್ಲೆಟ್ಸ್), ಜಿನ್ಸೆಂಗ್, ಮಲ್ಟಿವಿಟಮಿನ್ ಅಂಡ್ ಮಲ್ಟಿಮಿನರಲ್ಸ್ ಕ್ಯಾಪ್ಸೂಲ್ಸ್, ವಿನ್ಸೀ (ಆಸ್ಕೋರ್ಬಿಕ್ ಆಸಿಡ್ ಟ್ಯಾಬ್ಲೆಟ್ಸ್ ಐಪಿ 500 ಎಂಜಿ), ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 500 ಎಂಜಿ, ಕೆಪ್ಸಿ-50 ಸಿಟಾಗ್ಲಿಪ್ಟಿನ್ ಫಾಸ್ಪೇಟ್ ಟ್ಯಾಬ್ಲೆಟ್ಸ್ ಐಪಿ,
ಎಲ್-ಡಿಐಸಿ ಜೆಲ್ (ಡೈಕ್ಲೋಫೆನಕ್ ಢೈಥೈಲಮೈನ್, ಲಿನ್ಸೆಡ್ ಆಯಿಲ್, ಮೀಥೈಲ್ ಸ್ಯಾಲಿಸಿಲೇಟ್ ಅಂಡ್ ಮೆಂಥಾಲ್ ಜೆಲ್) ಈ ಔಷಧಿಗಳನ್ನು, ಕಾಂತವರ್ಧಕಗಳನ್ನು ಉತ್ತಮ ಗುಣಮಟ್ಟದಲ್ಲವೆಂದು ಅವರು ಘೋಷಿಸಿದ್ದಾರೆ.ಈ ಮಾತ್ರೆಗಳು ಮತ್ತು ಔಷಧಿಗಳನ್ನು ನಿಷೇಧಿಸಲಾಗಿರುವುದರಿಂದ ಯಾರಾದರೂ ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ