ಬೆಂಗಳೂರು
ಚಿಂತಾಮಣಿಯಿಂದ ವಿಧಾನಸೌಧಕ್ಕೆೆ ಪಾದಯಾತ್ರೆೆ ಮೂಲಕ ಬರುತ್ತಿಿದ್ದ ದಲಿತ ಸಂಘಟನೆಗಳ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಸೋಮವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಚಿಂತಾಮಣಿಯ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಆವರಣದಲ್ಲಿ ಅಂಬಬೇಡ್ಕರ್ ಪ್ರತಿಮೆಯನ್ನು ಕೂಡಲೇ ಅನಾವರಣಗೊಳಿಸುವಂತೆ ಆಗ್ರಹಿಸಿ ಚಿಂತಾಮಣಿಯಿಂದ ಬೆಂಗಳೂರು ವಿಧಾನಸೌಧವರೆಗೂ ಪಾದಯಾತ್ರೆೆ ಮಾಡುತ್ತಿದ್ದ ದಲಿತ ಮುಖಂಡರನ್ನು ಪೊಲೀಸರು ಬಂಧಿಸಿರುವುದು ರಾಜ್ಯ ಸರಕಾರದ ದಲಿತ ವಿರೋಧಿ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ಈ ಕೂಡಲೇ ಹೋರಾಟಗಾರರನ್ನೂ ಬಂಧಿಸಿದ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಾಮಿ, ಜಿ.ಸಿ.ವೆಂಕಟರಮಣಪ್ಪ, ಗೋಪಾಲ್ ಗೌಡ, ಜಿಕೆ ಕೃಷ್ಣ ರೆಡ್ಡಿ, ಎನ್ ಮಹೇಶ್, ಕೋದಡ್ ಸ್ವಾಮಿ, ಪಡುರಂಗ ಸ್ವಾಮಿ, ವಿಜಯ ನರಸಿಂಹ, ರಘು ಮತ್ತಿತರರು ಭಾಗವಹಿಸಿದ್ದರು.
