ಬೆಂಗಳೂರು:
ದೇಶದ ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರಿನಲ್ಲಿ 89 ಹೊಸ ಟೆಕ್ ಪಾರ್ಕ್‌ಗಳ ನಿರ್ಮಾಣ ಮತ್ತು ವಿಸ್ತರಣೆ ಬಗ್ಗೆ ರಾಜ್ಯ ಸರ್ಕಾರ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ರಾಜ್ಯ ಸರ್ಕಾರವು ನವೆಂಬರ್ ಅಂತ್ಯದ ವೇಳೆಗೆ ಟೆಕ್ ಶೃಂಗಸಭೆಗೆ ಸಜ್ಜಾಗುತ್ತಿರುವ ಸಮಯದಲ್ಲಿ ಈ ಘೋಷಣೆ ಬಂದಿದೆ ಮತ್ತು ನಗರದ ಮೂಲ ಸೌಕರ್ಯ ಕೊರತೆ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
“ಈ ಘೋಷಣೆಯೊಂದಿಗೆ, ರಾಜ್ಯ ರಾಜಧಾನಿ ಬೆಂಗಳೂರನ್ನು ಟೆಕ್ ಕ್ಯಾಪಿಟಲ್ ಆಗಿ ಪರಿವರ್ತಿಸುವ ಉದ್ದೇಶ ಹೊಂದಲಾಗಿದೆ. ಆದರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಒಂದು ದೊಡ್ಡ ಸವಾಲಾಗಿದ್ದು, ಅದನ್ನು ತ್ವರಿತ ಗತಿಯಲ್ಲಿ ಮಾಡಬೇಕಾಗಿದೆ ಎಂದು ಐಟಿ-ಬಿಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಪಟ್ಟಿ ಮಾಡಲಾದ ಕೆಲವು ಕೈಗಾರಿಕಾ ಮತ್ತು ಟೆಕ್ ಪಾರ್ಕ್‌ಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಟೆಕ್ ಶೃಂಗಸಭೆಯ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನವು ಈಗ ಮೂಲಸೌಕರ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಹೂಡಿಕೆಗಳನ್ನು ಸೆಳೆಯುವುದರ ಮೇಲೆ ಕೇಂದ್ರೀಕೃತವಾಗಿದೆ.
ಹೊಸ ಟೆಕ್ ಪಾರ್ಕ್ ಗಳು ಹೆಚ್ಚಾಗಿ ಉತ್ತರ ಬೆಂಗಳೂರು, ಬೆಳ್ಳಂದೂರು, ವೈಟ್‌ಫೀಲ್ಡ್, ಹೆಬ್ಬಾಳ ಮತ್ತು ಹೊರ ವರ್ತುಲ ರಸ್ತೆಯಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅಲ್ಲಿ ಈಗಾಗಲೇ ಬೆಳವಣಿಗೆ ನಡೆಯುತ್ತಿದೆ. ಯಶವಂತಪುರ, ಬಾಣಸವಾಡಿ, ಸಿವಿ ರಾಮನ್ ನಗರ, ನಾಗವಾರ, ಬನ್ನೇರುಘಟ್ಟ, ಕೋರಮಂಗಲ, ಇಂದಿರಾನಗರ, ತುಮಕೂರು ರಸ್ತೆ ಮತ್ತು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ಸೇರಿದಂತೆ ಇತರ ಪ್ರದೇಶಗಳಲ್ಲೂ ಬೆಳವಣಿಗೆಗೆ ಅವಕಾಶವಿದೆ.
ಇಂತಹ ಹೆಚ್ಚಿನ ಬೆಳವಣಿಗೆಗಳು ಜೀವನ, ಕೆಲಸ ಮತ್ತು ಆಟದ ಸ್ಥಳಗಳನ್ನು ರಚಿಸಲು ಸಹಾಯ ಮಾಡುತ್ತದೆ. ಈ ಟೆಕ್ ಪಾರ್ಕ್‌ಗಳು ಪರಿಸರ ವ್ಯವಸ್ಥೆ ಮತ್ತು ನಗರವನ್ನು ವಿಶಾಲವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ ಎಂದು ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಎಕ್ ರೂಪ್ ಕೌರ್ ಅವರು ಹೇಳಿದ್ದಾರೆ.