ತಮ್ಮ ಮುಂದಿನ ಸಿನಿಮಾ ಅನೌನ್ಸ್‌ ಮಾಡಿದ ಸ್ಟಾರ್‌ ಡೈರೆಕ್ಟರ್‌….!

ಆಂಧ್ರಪ್ರದೇಶ: 

     ‘ಆರ್​ಆರ್​ಆರ್’​ ಸಿನಿಮಾಗೆ ಆಸ್ಕರ್​ ಪ್ರಶಸ್ತಿ ತಂದುಕೊಟ್ಟ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

     ‘ಮಗಧೀರ’, ‘ಬಾಹುಬಲಿ’, ‘ಈಗ’ ಮತ್ತು ಆಸ್ಕರ್​ ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್’​ ನಂತಹ ಸಿನಿಮಾಗಳ ಮುಖೇನ ಸಿನಿಪ್ರಿಯರ ಮನಗೆದ್ದ ನಿರ್ದೇಶಕ ರಾಜಮೌಳಿ, ಬಹು ದಿನಗಳ ನಂತರ ಇಂದು ತಮ್ಮ ಮುಂದಿನ ಸಿನಿಮಾ ‘ಮೇಡ್ ಇನ್ ಇಂಡಿಯಾ’ ಬಗ್ಗೆ ಹೊಸ ಮಾಹಿತಿಯೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

     ‘ಮೇಡ್ ಇನ್ ಇಂಡಿಯಾ’ ಎಂಬ ಶೀರ್ಷಿಕೆಯಡಿ ಮೂಡಿಬರುತ್ತಿರುವ ಈ ಸಿನಿಮಾ ಒಂದು ಬಯೋಪಿಕ್ ಚಿತ್ರ ಎಂದು ರಾಜಮೌಳಿ ತಿಳಿಸಿದ್ದಾರೆ. ಪುತ್ರ ಎಸ್‌.ಎಸ್. ಕಾರ್ತಿಕೇಯ ಮತ್ತು ವರುಣ್ ಗುಪ್ತಾ ಚಿತ್ರವನ್ನು ನಿರ್ಮಿಸಲಿದ್ದಾರೆ. ನಿತಿನ್ ಕಕ್ಕರ್ ನಿರ್ದೇಶನ ಮಾಡಲಿದ್ದಾರೆ.

    ಈ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡದಿದ್ದರೂ ಅವರ ಪುತ್ರ ನಿರ್ಮಿಸಲಿದ್ದಾರೆ ಎಂಬ ಸಂಗತಿ ನಿರ್ದೇಶಕನ ಅಭಿಮಾನಿಗಳಿಗೆ ಕೊಂಚ ಸಂತಸ ತಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap