ಆರ್.ಇ.ಸಿ.ಪಿ ರೈತರ ನೇಣಿಗೆ ಕೊನೆ ಗಂಟು

ತಿಪಟೂರು
    ಆರ್.ಇ.ಸಿ.ಪಿ ಒಪ್ಪಂದ ರೈತರ ಸಾವಿಗೆ ಕೊನೆಯ ಗಂಟು ಹಾಕಿದಂತೆ ಎಂದು ಆರ್.ಕೆ.ಎಸ್ ಸಂಚಾಲಕ ಸ್ವಾಮಿ ಆರೋಪಿಸಿದರು.
    ನಗರದ ರೈತಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್.ಇ.ಸಿ.ಪಿ ಒಪ್ಪಂದವು ಬರಗಾಲದಲ್ಲಿ ರೈತರ ಕೈಹಿಡಿದ ಹೈನುಗಾರಿಕೆಯನ್ನು ಹಾಳುಮಾಡಲು ಕೇಂದ್ರ ಸರ್ಕಾರವು ರೈತರ ನೇಣಿಗೆ ಕುಣಿಕೆಯನ್ನು ಬಿಗಿಮಾಡುತ್ತಿದೆ ಎಂದು ಆರೋಪಿಸಿದ ಅವರು, 2012ರಿಂದಲೇ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮಾಡಿತ್ತು. ಜೀವಿಗಳು ಹಾಗೂ ವಿರೋಧ ಪಕ್ಷಗಳ ಮುಖಂಡರು ಈ ಬಗ್ಗೆ ಚರ್ಚೆ ನಡೆಸಿಲ್ಲ.
     ವಿದೇಶಿ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ತೆಗೆದುಹಾಕುವ ಈ ಒಪ್ಪಂದವು ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ. ಹಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬಗ್ಗೆ ಚರ್ಚೆ ನಡೆಯದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ರಾಮು ಆಕ್ರೋಶ ವ್ಯಕ್ತಪಡಿಸಿದರು. ನವೆಂಬರ್ 4 ರಂದು 16 ರಾಷ್ಟ್ರಗಳೊಂದಿಗೆ ಸಹಿ ಹಾಕಲು ಭಾರತ ಸಿದ್ಧತೆ ನಡೆಸಿದೆ.
     ಇದರ ಅಡಿಯಲ್ಲಿ ಆಮದು ವಸ್ತುಗಳ ಮೇಲೆ ತೆರಿಗೆ ವಿಧಿಸುವಂತಿಲ್ಲ. ಇದರಿಂದಾಗಿ ನಮ್ಮ ದೇಶದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆಗೆ ಹೊಡೆತ ಬೀಳಲಿದೆ. ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ ಕುಸಿದು ಹೋಗಲಿದೆ. ಜಗತ್ತಿನ ಆಹಾರ ವ್ಯವಸ್ಥೆಯನ್ನು ಕೆಲವೇ ಕೆಲವು ಎಂಎನ್‍ಸಿಗಳು ನಿಯಂತ್ರಿಸಲಿವೆ. ಕೈಗಾರಿಕಾ ಕೃಷಿಯು ಹೆಚ್ಚಳವಾಗಿ ಭೂಮಿಯ ತಾಪಮಾನ ಇನ್ನಷ್ಟು ಹೆಚ್ಚಲಿದೆ. ಒಪ್ಪಂದದಿಂದಾಗಿ ದೇಶದ ರೈತರು ಜಮೀನನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು ಎಂದರು.
ದೇಸಿ ಹಾಲಿನ ಬೇಡಿಕೆ ಕುಸಿತ : ಆತಂಕ
    ದೇಸಿ ಕೃಷಿ ಉತ್ಪನ್ನಗಳನ್ನು ತೆರಿಗೆ ಮುಕ್ತ ಮಾಡುವುದು ಬೇಡ. ನಮ್ಮ ದೇಶದಲ್ಲಿ ಇದರ ಅಗತ್ಯವಿಲ್ಲ. ಕೃಷಿ ವಲಯವನ್ನು ಈ ಒಪ್ಪಂದದಿಂದ ಕೈ ಬಿಡಬೇಕು. ಗ್ರಾಹಕರು ಸಹಜವಾಗಿಯೇ ಅಗ್ಗದ ದರದ ಹಾಲು ಹಾಗೂ ಅದರ ಉತ್ಪನ್ನಗಳತ್ತ ವಾಲುತ್ತಾರೆ. ಇದರಿಂದ ದೇಸಿ ಹಾಲಿನ ಬೇಡಿಕೆ ಕುಸಿಯಲಿದೆ. ಇದು ಒಂದು ರೀತಿಯಲ್ಲಿ ಮಾರಕ ಒಪ್ಪಂದ ಎಂದು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ತಿಳಿದರು.
    ಇದನ್ನು ವಿರೋಧಿಸಿ ಅಕ್ಟೋಬರ್ 31 ರಂದು ತಿಟಪೂರು ಗ್ರಾಮದೇವತೆ ಕೆಂಪಮ್ಮ ದೇವಸ್ಥಾನದಿಂದ ಉಪವಿಭಾಗಾ ಧಿಕಾರಿಗಳ ಕಚೇರಿವರೆಗೆ ಆರ್.ಇ.ಸಿ.ಪಿ ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಎಲ್ಲಾ ಸಂಘಟನೆಗಳ ಬೆಂಬಲದೊಂದಿಗೆ ನಮ್ಮ ಹೈನುಗಾರರು ಭಾಗವಹಿಸಬೇಕೆಂದು ಕೆ.ಎಂ.ಎಫ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ತಿಳಿಸಿದರು.
    ಪತ್ರಿಕಾಘೋಷ್ಠಿಯಲ್ಲಿ ಕ.ರಾ.ರೈ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್.ದೇವರಾಜು, ಕ.ಕೃ.ರೈ.ಬಂಧು ವೇದಿಕೆ ಸ್ವಾಮಿ ತಿಮ್ಮಲಾಪುರ, ಮನೋಹರ್ ಪಾಟೀಲ್, ಬೆಲೆಕಾವಲು ಸಮಿತಿ ಶ್ರೀಕಾಂತ್ ಕೆಳಹಟ್ಟಿ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link