ಸಲ್ಮಾನ್ ಖಾನ್:
‘ಬಿಗ್ ಬಾಸ್ 13’ ವೇಳೆ ಇಬ್ಬರೂ ಪರಸ್ಪರ ತುಂಬ ಕ್ಲೋಸ್ ಆಗಿದ್ದರು. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿತ್ತು. ಇನ್ನೇನು ಸಿದ್ದಾರ್ಥ್ ಶುಕ್ಲಾ ಮತ್ತು ಶೆಹನಾಜ್ ಗಿಲ್ ಮದುವೆ ಆಗುತ್ತಾರೆ ಎಂದುಕೊಳ್ಳುವಾಗ ವಿಧಿ ತನ್ನ ಕ್ರೂರತೆ ಮೆರೆಯಿತು. ಕಳೆದ ವರ್ಷ ಸೆ.2ರಂದು ಸಿದ್ದಾರ್ಥ್ ಶುಕ್ಲಾ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದರು.
ಕೆಜಿಎಫ್ ಚಾಪ್ಟರ್ 2 ದಾಖಲೆ: ಅತೀ ಹೆಚ್ಚು ಗಳಿಕೆ ಕಂಡ ಭಾರತದ ಟಾಪ್ 10 ಸಿನಿಮಾ ಇವು
ಸಾಗರದಲ್ಲಿ ಮುಳುಗುವಂತಾಗಿತ್ತು. ಪ್ರಿಯಕರನ ನಿಧನದ ನೋವಿನಿಂದ ಅವರು ತೀವ್ರವಾಗಿ ಕುಸಿದುಹೋಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಈಗ ಸಲ್ಮಾನ್ ಖಾನ್ ಜೊತೆ ಆಪ್ತವಾಗಿ ನಡೆದುಕೊಂಡು ಸುದ್ದಿ ಆಗಿದ್ದಾರೆ. ಎಲ್ಲರ ಎದುರು ಸಲ್ಲುಗೆ ಶೆಹನಾಜ್ ಗಿಲ್ ಪ್ರೀತಿಯ ಚುಂಬನ ನೀಡಿದ್ದಾರೆ. ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಎಲ್ಲೆಡೆ ಈದ್ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲೂ ಈದ್ ಸಲುವಾಗಿ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ನಟಿ ಶೆಹನಾಜ್ ಗಿಲ್ ಕೂಡ ಸಲ್ಮಾನ್ ಖಾನ್ ಕುಟುಂಬದವರ ಜೊತೆ ಬೆರೆತಿದ್ದಾರೆ.
ಡಾ.ಪುನೀತ್ ರಾಜ್ಕುಮಾರ್ಗೆ ಬಸವಶ್ರೀ ಪ್ರಶಸ್ತಿ: ಮುರುಘಾ ಶರಣರಿಂದ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ
ಪಾರ್ಟಿ ಮುಗಿಸಿ ಹೊರಡುವಾಗ ಅವರು ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಅವರನ್ನು ಪದೇ ಪದೇ ತಬ್ಬಿಕೊಂಡು ಪ್ರೀತಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಸಲ್ಲು ಕುತ್ತಿಗೆಗೆ ಅವರು ಕಿಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
