ಮುಂಬೈ:
ನಟ ಸೋನು ಸೂದ್ ಅವರು ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಗಮನ ಸೆಳೆದವರು. ಕೊವಿಡ್ ಬಳಿಕ ಸಾಮಾಜಿಕ ಕೆಲಸಗಳಲ್ಲಿ ಅವರು ತೊಡಗಿಕೊಳ್ಳುತ್ತಾ ಇದ್ದಾರೆ. ಈಗ ಅವರ ವಿರುದ್ಧ ಬಂಧನದ ವಾರಂಟ್ ಜಾರಿ ಆಗಿದೆ. 10 ಲಕ್ಷ ರೂಪಾಯಿ ಫ್ರಾಡ್ ಕೇಸ್ಗೆ ಸಂಬಂಧಿಸಿದಂತೆ ಲುಧಿಯಾನಾ ಕೋರ್ಟ್ ನಟನ ವಿರುದ್ಧ ವಾರಂಟ್ ಜಾರಿ ಮಾಡಿದೆ. ಇದರಿಂದ ಅವರಿಗೆ ಬಂಧನದ ಭೀತಿ ಶುರುವಾಗಿದೆ.
ಲುಧಿಯಾನಾ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಅವರ ವಿರುದ್ಧ 10 ಲಕ್ಷ ರೂಪಾಯಿ ಫ್ರಾಡ್ ಮಾಡಿದ ಆರೋಪ ಹಾಕಿದ್ದರು. ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಈ ಮೋಸ ನಡೆದಿತ್ತು. ಈ ಪ್ರಕರಣದ ವಿಚಾರಣೆ ಲುಧಿಯಾನಾ ಕೋರ್ಟ್ನಲ್ಲಿ ನಡೆಯುತ್ತಾ ಇತ್ತು. ಈ ಪ್ರಕರಣದಲ್ಲಿ ಸೋನು ಸೂದ್ ಅವರು ಸಾಕ್ಷಿ ಹೇಳಬೇಕಿತ್ತು. ಆದರೆ, ಅವರು ಪದೇ ಪದೇ ಸಮನ್ಸ್ ನೀಡಿದ ಹೊರತಾಗಿಯೂ ಕೋರ್ಟ್ಗೆ ಬಂದಿಲ್ಲ. ಈ ಕಾರಣಕ್ಕೆ ಅವರ ವಿರುದ್ಧ ಬಂಧನದ ವಾರಂಟ್ ಜಾರಿ ಆಗಿದೆ.
ಮುಂಬೈ ನಿವಾಸಿ ಸೋನು ಸೂದ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಕೋರ್ಟ್ಗೆ ಹಾಜರಾಗಿಲ್ಲ. ಹೀಗಾಗಿ ಅವರನ್ನು ಬಂಧಿಸಿ ಕೋರ್ಟ್ ಎದುರು ತಂದು ನಿಲ್ಲಿಸಬೇಕು’ ಎಂದು ಲುಧಿಯಾನಾ ಕೋರ್ಟ್ ಮುಂಬೈ ಪೊಲೀಸರಿಗೆ ಸೂಚನೆ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ರಂದು ಇದೆ.
ಸೋನು ಸೂದ್ ಅವರು ಇತ್ತೀಚೆಗೆ ವಿಲನ್ ರೀತಿಯ ಪಾತ್ರಗಳಿಂದ ದೂರವೇ ಇದ್ದಾರೆ. ಅವರು ಈ ರೀತಿಯ ಪಾತ್ರಗಳನ್ನು ಸಿಕ್ಕರೆ ಒಪ್ಪುತ್ತಿಲ್ಲ. ಕೇವಲ ಹೀರೋ ಆಗಿ ಮಾತ್ರ ಅವರು ನಟಿಸುತ್ತಿದ್ದಾರೆ. ಆದರೆ, ಆ ರೀತಿಯ ಒಳ್ಳೆಯ ಪಾತ್ರಗಳು ಅವರನ್ನು ಹುಡುಕಿ ಬಂದಿಲ್ಲ. ಅವರು ಕನ್ನಡದಲ್ಲಿ ‘ವಿಷ್ಣುವರ್ಧನ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದರು. ಇದರಲ್ಲಿ ಆದಿಶೇಷ ಹೆಸರಿನ ಖಡಕ್ ವಿಲನ್ ಪಾತ್ರ ಮಾಡಿದ್ದರು.
