ಚಿಕ್ಕಮಗಳೂರು:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕುಟುಂಬ ಸಮೇತ ಇಂದು ಬೆಳಿಗ್ಗೆ ಶೃಂಗೇರಿ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಅವರಿಗೆ ಪೂರ್ಣ ಕುಂಭ ಸ್ವಾಗತ ದೊರೆಯಿತು.
ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಜೊತೆಯಲ್ಲಿದ್ದರು. ಶಾರದಾಂಬೆ ಸನ್ನಿಧಾನದಲ್ಲಿ ಕುಟುಂಬ ಸಮೇತ ಪೂಜಾಕೈಂಕರ್ಯ ಕೈಗೊಂಡಿದ್ದಾರೆ.
ಇನ್ನು ಈ ಕುರಿತು ಕರ್ನಾಟಕ ಬಿಜೆಪಿಯು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೇವಿಯು ಅನುಗ್ರಹ ನೀಡಲಿ ಎಂದಿದೆ.
ಶೃಂಗೇರಿ ಶಾರದಾಂಬೆಯ ದರ್ಶನದಿಂದ ಸಿಎಂ ಮನಸ್ಸು ಪರಿವರ್ತನೆಯಾಗಲಿ. ದಂಗೆ-ದಂಧೆಯನ್ನು ಬಿಟ್ಟು, ನನೆಗುದಿಗೆ ಬಿದ್ದಿರುವ ನಾಡಿನ ಅಭಿವೃದ್ಧಿಯತ್ತ ಗಮನ ಹರಿಸುವ ಸದ್ಬುದ್ಧಿಯನ್ನು ದೇವಿ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ, ರಾಜ್ಯ ಪ್ರವಾಸವನ್ನೂ ಮಾಡುವ ಮನಸ್ಸನ್ನು ಅನುಗ್ರಹಿಸಲಿ. ಶುಭಪ್ರಯಾಣ! ಎಂದು ಟ್ವೀಟ್ ಮಾಡಿದೆ.
ಶೃಂಗೇರಿ ಶಾರದಾಂಬೆಯ ದರ್ಶನದಿಂದ ಸಿಎಂ ಮನಸ್ಸು ಪರಿವರ್ತನೆಯಾಗಲಿ. ದಂಗೆ-ದಂಧೆಯನ್ನು ಬಿಟ್ಟು, ನನೆಗುದಿಗೆ ಬಿದ್ದಿರುವ ನಾಡಿನ ಅಭಿವೃದ್ಧಿಯತ್ತ ಗಮನ ಹರಿಸುವ ಸದ್ಬುದ್ಧಿಯನ್ನು ದೇವಿ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ, ರಾಜ್ಯ ಪ್ರವಾಸವನ್ನೂ ಮಾಡುವ ಮನಸ್ಸನ್ನು ಅನುಗ್ರಹಿಸಲಿ. ಶುಭಪ್ರಯಾಣ @hd_kumaraswamyಯವರೇ!
— BJP Karnataka (@BJP4Karnataka) September 22, 2018
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ