ಬೆಂಗಳೂರು:
ಒಳಚರಂಡಿ ದುರಸ್ತಿಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಜಿ.ಹಳ್ಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಕಾರ್ಮಿಕರಾದ ಚೋಟು ಮತ್ತು ಗಫೂರ್ ಎಂದು ಗುರುತಿಸಲಾಗಿದೆ.
ಕೆಜಿ ಹಳ್ಳಿ ಸಮೀಪ ಒಂದು ಟೀ ಅಂಗಡಿ ಇದೆ. ಆ ಟೀ ಅಂಗಡಿಯಿಂದ ಬಂದಂತಹ ನೀರು, ಇನ್ನಿತರೆ ಪದಾರ್ಥಗಳು ಹೋಗಿ ಒಂದು ಹೊಂಡದಲ್ಲಿ ಶೇಖರಣೆಯಾಗುತ್ತಿತ್ತು. ಅದನ್ನು ಸರಿಪಡಿಸಲು ಈ ಇಬ್ಬರು ಕಾರ್ಮಿಕರಿಗೆ ಸ್ವಲ್ಪ ಹಣ ನೀಡಿ ಕರೆಸಿಕೊಳ್ಳಲಾಗಿತ್ತು. ಆದರೆ ಕೆಲಸ ನಡೆಯುತ್ತಿರುವ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ