ಮಂಗಳೂರು:
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನವೊಂದರ ಮೇಲೆ ಮರ ಉರುಳಿಬಿದ್ದ ಘಟನೆ ನಗರದ ನಂತೂರು ವೃತ್ತದ ಬಳಿ ನಡೆದಿದೆ.
ಮಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್ ಇದಾಗಿದ್ದು ಘಟನೆಯ ಸಂದರ್ಭದಲ್ಲಿ ಬಸ್ಸಿನಲ್ಲಿ 17 ಜನ ವಿದ್ಯಾರ್ಥಿಗಳಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಮರ ಪೂರ್ತಿ ವಾಹನದ ಮೇಲೆ ಬೀಳದ್ದಕ್ಕೆ ಶಾಲಾ ವಾಹನದಲ್ಲಿದ್ದ ಮಕ್ಕಳು ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
A tree came down on a school bus near nanturu circle.. 17 children were travelling..DCP and other police officials are at the spot.. spoke to principal of concerned school ,she informed all 17 children are safe.. no major injuries pic.twitter.com/W6K7LuJ0c5
— Harsha IPS CP Mangaluru City (@compolmlr) August 14, 2019
ಘಟನೆಯಿಂದಾಗಿ ಬಸ್ಸಿನ ಒಳಗಿದ್ದ ಮಕ್ಕಳು ಭಯಗೊಂಡಿದ್ದರು. ಬಳಿಕ ಮಕ್ಕಳ ಸಹಿತ ಬಸ್ಸಿನಲ್ಲಿದ್ದವರನ್ನು ಸುರಕ್ಷಿತವಾಗಿ ಇಳಿಸಿ ಬದಲೀ ವ್ಯವಸ್ಥೆಯ ಮೂಲಕ ಶಾಲೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಶಾಲಾ ಮಕ್ಕಳ ಸಹಿತ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿಯನ್ನು ಸಂಬಂಧಿತ ಶಾಲೆಯ ಪ್ರಾಂಶುಪಾಲರು ತನಗೆ ನೀಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಾಗಿರುವ ಪಿ.ಎಸ್. ಹರ್ಷ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ