ಬೆಂಗಳೂರು:
ಉಪಮುಖ್ಯಮಂತ್ರಿ ಅವರು ಮತ್ತೆ ಮತ್ತೆ ಝೀರೋ ಟ್ರಾಫಿಕ್‍ನಲ್ಲಿ ಹೋಗುತ್ತಿದ್ದು, ಇದೀಗ ಪರಮೇಶ್ವರ್ ಅವರ ಝೀರೋ ಟ್ರಾಫಿಕ್ ಪರಿಣಾಮದಿಂದ ಶಾಲಾ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗಿದೆ.
ಆರ್.ಟಿ.ನಗರ ಪೊಲೀಸ್ ಠಾಣೆ ಬಳಿ ರಸ್ತೆ ಅಗಲೀಕರಣ ವೀಕ್ಷಣೆಗೆಂದು ಡಿಸಿಎಂ ಪರಮೇಶ್ವರ್ ಬಂದಿದ್ದರು. ಈ ವೇಳೆ ಝೀರೋ ಟ್ರಾಫಿಕ್‌ನಲ್ಲಿ ಹೋಗಿದ್ದರು. ಅದು ಜನರು ಕಚೇರಿಗೆ, ಶಾಲಾ, ಕಾಲೇಜುಗಳಿಗೆ ಹೋಗುವ ಸಮಯವಾಗಿದ್ದರಿಂದ ಝೀರೋ ಟ್ರಾಫಿಕ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಆರ್‌ಟಿನಗರದ ಸುತ್ತಮುತ್ತ ಅನೇಕ ಕಡೆ ವಿಪರೀತ ಟ್ರಾಫಿಕ್ ಜಾಮ್ ಉಂಟಾಯಿತು. ತಡವಾಗುತ್ತಿದ್ದರಿಂದ ಟ್ರಾಫಿಕ್ ದಟ್ಟಣೆಯಿಂದ ಮುಕ್ತಿ ಸಿಗುವವರೆಗೂ ಹೆಣಗಾಡುವಂತಾಯಿತು.
ವಿದ್ಯಾರ್ಥಿಗಳ ಕ್ಷಮೆ :
ಇದರಿಂದಾಗಿ ಅನೇಕ ಶಾಲೆಗಳ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ತಡವಾಯಿತು. ಪೊಲೀಸರಿಗೆ ಅಂಬುಲೆನ್ಸ್, ಶಾಲಾ ವಾಹನಗಳಿಗೆ ಅಡ್ಡಿ ಮಾಡಬೇಡಿ ಎಂದು ಹೇಳಿದ್ದೆ. ಆದರೂ ಈ ರೀತಿ ಕೆಲವೊಮ್ಮೆ ಆಗಿದೆ. ಇದು ನನಗೂ ಬೇಸರ ತಂದಿದೆ. ನನ್ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಮ್ಮಿಂದ ಯಾರಿಗೂ ಬೇಸರ ಆಗಬಾರದು. ಮತ್ತೊಮ್ಮೆ ಈ ರೀತಿ ಆಗೊಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ