ನಟ ದುನಿಯಾ ವಿಜಿ ಬಂಧನ

ಬೆಂಗಳೂರು:

      ನಟ ದುನಿಯಾ ವಿಜಯ್ ರವರನ್ನು ಹೈಗ್ರೌಂಡ್ಸ್​ ಠಾಣೆಯ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ನಿನ್ನೆ ತಡ ರಾತ್ರಿ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಪೋಲೀಸರ ಅತಿಥಿ ಆಗಿದ್ದಾರೆ.

      ಬೆಂಗಳೂರಿನ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್​ ಕಾಂಪಿಟೇಷನ್​ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ತಂಡ ಹಾಗೂ ​ಟ್ರೈನರ್​ ಮಾರುತಿ ಗೌಡ ನಡುವೆ ಜಗಳ ಶುರುವಾಗಿದೆ.

       ಜಿಮ್​ ತರಬೇತುದಾರ ಮಾರುತಿಗೌಡ ಎಂಬುವವರ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ಸ್​ ಠಾಣೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
      ಐಪಿಸಿ ಸೆಕ್ಷನ್​ 365 ,342, 325 ಹಾಗೂ 506 ರ ಅಡಿ ಕೇಸ್ ದಾಖಲಿಸಲಾಗಿದೆ. ಮಾರುತಿ ಚಿಕ್ಕಪ್ಪ ನೀಡಿದ ದುನಿಯಾ ವಿಜಯ್ ಮೇಲೆ ದೂರು ನೀಡಿದ್ದು, ಹೈಗ್ರೌಂಡ್ ಪೊಲೀಸರು ಬಂದಿಸಿದ್ದಾರೆ. 
 
      ಎರಡು ತಂಡದ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳ ಆಗಿದೆ. ಬಳಿಕ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್​ ಹಾಗೂ ಮಣಿಪ್ರಸಾದ್​ ಕಿಡ್ನಾಪ್​ ಮಾಡಿದ್ದಾರೆ. ಕಾರಿನಲ್ಲಿ ಕರೆದೊಯ್ದಿದ್ದು, ಹಲ್ಲೆ ಮಾಡಿದ್ದಾರೆ ಎಂದು ಪಾನಿಪುರಿ ಕಿಟ್ಟಿ ಆರೋಪ ಮಾಡಿದ್ದಾರೆ. 
            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 
 

Recent Articles

spot_img

Related Stories

Share via
Copy link