ಗುಬ್ಬಿ:
ದೇವಸ್ಥಾನದ ಹುಂಡಿ ಕಳವು ಮಾಡಿ 40 ಸಾವಿರ ಹಣ ದೋಚಿರುವ ಘಟನೆ ಗುಬ್ಬಿ ಪಟ್ಟಣದ ಮಡೇನಹಳ್ಳಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ತುಮಕೂರು ಜಿಲ್ಲೆಯಲ್ಲಿ ಹುಂಡಿ ಕಳವುಗಳ ಪ್ರಕರಣ ಹೆಚ್ಚಾಗಿದ್ದು, ಕಳೆದ ಒಂದು ತಿಂಗಳಿನಿಂದ ಸುಮಾರು 3 ಕಡೆಗಳಲ್ಲಿ ಕಳ್ಳತನವಾಗಿರುವುದು ಕಂಡುಬಂದಿದೆ.
ಇನ್ನೂ ಕಳೆದ ಎರಡೂ ಮೂರು ದಿನಗಳ ಹಿಂದೆ ಗುಬ್ಬಿ ಪಟ್ಟಣದ ಕುವೆಂಪು ನಗರದಲ್ಲಿ ಕಾಂಗ್ರೆಸ್ ಮುಖಂಡರ ಮನೆಯಲ್ಲಿ 50 ಸಾವಿರ ಮೌಲ್ಯದ ಎಲ್‍ಇಡಿ ಟಿವಿಯು ಸಹ ಕಳ್ಳತನವಾಗಿತ್ತು. ಇತ್ತೀಚಿಗೆ ಕಳ್ಳರು ಪಟ್ಟಣದಲ್ಲಿ ಹೆಚ್ಚಾಗಿದ್ದು ಜನರಲ್ಲಿ ಆತಂಕವುಂಟು ಮಾಡುತ್ತಿದ್ದು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ಕಳ್ಳರನ್ನು ಹಿಡಿದು ನಡೆಯುತ್ತಿರುವ ಕಳ್ಳತನಗಳನ್ನು ತಪ್ಪಿಸಬೇಕು ಎಂದು ನಾಗರೀಕರು ಒತ್ತಾಯಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ