ಪಾವಗಡ:
ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆಗೈದು ಬೈಕ್ ನಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ.
ಕವಿತ ಹತ್ಯೆಗೊಳಗಾದ ಮಹಿಳೆ. ಇವರು ಆಂಧ್ರ ಮೂಲದ ಪೇನುಗೊಂಡ ತಾಲ್ಲೂಕಿನ ತುರುಕಾಲಾಪಟ್ನಮ್ ಗ್ರಾಮದವರು. ಈಕೆಗೆ ಪಾವಗಡದ ಕಸಬ ಹೋಬಳಿ ವೆಂಕಟಾಪುರದ ಬಾಲಾಜಿಯೊಂದಿಗೆ ಮಧುವೆಯಾಗಿತ್ತು ಎನ್ನಲಾಗಿದೆ.
ಈಕೆ ಇಂದು ತನ್ನ ಡೈವೋರ್ಸ್ ಕೇಸಿನ ಸಂಬಂಧ ಪಾವಗಡ ಕೋರ್ಟ್ ಗೆ ತೆರಳಬೇಕಾದ ವೇಳೆ ಮಾನವಿಯತೆ ಇಲ್ಲದ ಕ್ರೂರಿ ಗಳು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಹಾಡುಹಗಲೇ ಮಹಿಳೆಯನ್ನು ಮಾರಕಾಸ್ತ್ರ ಬಳಸಿ ಹತ್ಯೆಗೈದಿರುವ ಘೋರ ಘಟನೆಗೆ ಪಟ್ಟಣವೇ ಬೆಚ್ಚಿಬಿದ್ದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
