ಮೈಸೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತರ ಆಗಮನ…!!

ಮೈಸೂರು

      ಭಾರತದ ಸ್ವಚ್ಚ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೈಸೂರಿಗೆ ನೂತನ ಪಾಲಿಕೆಯ ಆಯುಕ್ತರ ಆಗಮನವಾಗಿದೆ.ಈ ಹಿಂದೆ ಆಯುಕ್ತರಾಗಿದ್ದ ಜಗದೀಶ್ ಅವರು ನಗರದ ಹೆಮ್ಮೆ ಸ್ವಚ್ಚತೆ ಮತ್ತು ನಯರ್ಮಲ್ಯಗಳ ಬಗ್ಗೆ ತುಂಬಾ ಕಾಳಜಿ ವಹಿಸಿ ಮೈಸೂರನ್ನು ದೇಶದಲ್ಲಿ ಸ್ವಚ್ಚ ನಗರಗಳ ಪಟ್ಟಿಯಲ್ಲಿರಿಸಿದ್ದರು ಇನ್ನು ಅವರ ಜಾಗಕ್ಕೆ ಬಂದಿರುವ ಐಎಎಸ್ ಅಧಿಕಾರಿ ಶಿಲ್ಪಾ ಅವರ ಮೇಲೆ ತುಂಬಾ ಜವಾಬ್ದಾರಿ ಗಳಿರುವುದಂತೂ ನಿಜ, ನೂತನ ಆಯುಕ್ತರಾಗಿ ನೇಮಕಗೊಂಡಿರುವ ಶಿಲ್ಪಾ ನಾಗ್ ಅವರು ಈ ಹಿಂದೆ ಮೈಸೂರಿನಲ್ಲೇ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದರು ಎಂಬುದು  ಗಮನಿಸಬೇಕಾದ ವಿಷಯ.

       ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿರುವುದರಿಂದ ಅದರ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆಯಾದರೂ, ಬೇಸಿಗೆ ಆರಂಭವಾಗಿರುವ ಕಾರಣ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಆದ್ಯತೆ ನೀಡುತ್ತೇನೆ ಎಂದು ಶಿಲ್ಪಾನಾಗ್ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link