ಶಾಲಾ ಬಸ್ ಅಪಘಾತ : ಓರ್ವ ಸಾವು!!

0
23

ಮಂಡ್ಯ:

       ಶಾಲಾ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, . ಅದೃಷ್ಟವಶಾತ್ ಬಸ್‌ನಲ್ಲಿದ್ದ 40ಕ್ಕೂ ಅಧಿಕ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

      ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆ.ಹೊನ್ನಲಗೆರೆ ಗ್ರಾಮದ ಹೊರಹೊಲಯದಲ್ಲಿ ಈ ಘಟನೆ ನಡೆದಿದ್ದು, ಅದೇ ಗ್ರಾಮದ ಆರ್. ಕೆ. ವಿದ್ಯಾಸಂಸ್ಥೆಗೆ ಸೇರಿದ ಬಸ್ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ಹಳ್ಳಕ್ಕೆ ಉರುಳಿ ಬಿದ್ದು ಅಪಘಾತ ಸಂಭವಿಸಿದ್ದು, ಮಕ್ಕಳು ಸಣ್ಣ ಪುಟ್ಟ ಗಾಯಗಳಿಗೆ ಒಳಗಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಬಸ್ನಲ್ಲಿ ನಲವತ್ತಕ್ಕೂ ಅಧಿಕ ಮಕ್ಕಳು ಇದ್ದರೆಂದು ತಿಳಿದು ಬಂದಿದೆ .

      ಇದೇ ‌ವೇಳೆ ಶಾಲೆಗೆ ಮಗುವೊಂದನ್ನು ಬಿಟ್ಟು ಬರುತ್ತಿದ್ಧ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಲಾ ಬಸ್ ಬದಿಯಲ್ಲಿ ತೆರಳುತ್ತಿದ್ದವನ ಮೇಲೆ ಬಸ್ ಉರುಳಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

      ಗಾಯಗೊಂಡ ಮಕ್ಕಳನ್ನು ಮದ್ದೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here