ಹೆಲ್ಮೆಟ್ ಕೇಳಿದ್ದಕ್ಕೆ ಪೊಲೀಸರನ್ನೇ ಥಳಿಸಿದ ಕುಡುಕ

0
52

ದಾವಣಗೆರೆ:

      ಕುಡುಕನೊಬ್ಬ ಟ್ರಾಫಿಕ್‌ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ರೋಷಾವೇಶ ತೋರಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾನೆ. 

      ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಎಂಬುವವರು ಮದ್ಯ ಸೇವನೆ ಮಾಡಿ, ಹೆಲ್ಮಟ್​ ಧರಿಸದೆ ಗಾಡಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ರುದ್ರೇಶ್ ಅವರ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ರುದ್ರೇಶ್ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟ ಮಡಕೆಗಳಿಂದ ಪೊಲೀಸರ ಮೆಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

      ಎಎಸ್‍ಐ ಅಂಜಿನಪ್ಪ ಮತ್ತು ಸಿಬಂದಿಗಳಾದ ಸಿದ್ದೇಶ್, ನಾರಾಯಣರಾಜ್ ಅರಸು ಅವರ ಮೇಲೆ ದಾಳಿ ನಡೆಸಿದ್ದಾನೆ. ನಾರಾಯಣ ರಾಜು ಅವರ ಹಣೆಗೆ ಬಲವಾದ ಗಾಯವಾಗಿದೆ.  

       ದಾಳಿ ನಡೆಸಿದ ರುದ್ರೇಶ್‌ ವಕೀಲ ಎಂದು ಹೇಳಲಾಗಿದೆ. ಆತನನ್ನು ಬಂಧಿಸಿರುವ ದಾವಣಗೆರೆ ಸಂಚಾರಿ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಹಿನ್ನೆಲೆಯಲ್ಲಿ ಸೆಕ್ಷನ್ 353, 333 ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

  

LEAVE A REPLY

Please enter your comment!
Please enter your name here