ತುಮಕೂರು:
ತುಮಕೂರು ಮಹಾನಗರ ಪಾಲಿಕೆಯು 2019-20 ನೇ ಸಾಲಿನಲ್ಲಿ ಕುಡಿಯುವ ನೀರು, ಆರೋಗ್ಯ, ನಗರ ನೈರ್ಮಲ್ಯ, ಬೀದಿದೀಪ, ರಸ್ತೆ ಮತ್ತು ಚರಂಡಿ, ಒಳಚರಂಡಿ, ಉದ್ಯಾನ ಅಭಿವೃದ್ಧಿ ವಿಷಯಗಳಿಗೆ ಆದ್ಯತೆ ನೀಡಿ ಬಜೆಟ್ ರೂಪಿಸಿದೆ. ವಿವಿಧ ಮೂಲಗಳಿಂದ ಒಟ್ಟು 222 ಕೋಟಿ 30 ಲಕ್ಷ 91 ಸಾವಿರ ರೂ.ಗಳ ಆದಾಯವನ್ನು/ಸಂಪನ್ಮೂಲವನ್ನು ನಿರೀಕ್ಷಿಸಲಾಗಿದೆ. ಈ ಮೊತ್ತದಲ್ಲಿ ನಗರದ ಅಭಿವೃದ್ಧಿಗಾಗಿ ಒಟ್ಟು 218 ಕೋಟಿ 83 ಲಕ್ಷ 69 ಸಾವಿರ ರೂ.ಗಳನ್ನು ವೆಚ್ಚ ಮಾಡಲು ಅಂದಾಜಿಸಲಾಗಿದ್ದು, ಒಟ್ಟು 3 ಕೋಟಿ 47 ಲಕ್ಷ 22 ಸಾವಿರ ರೂ.ಗಳ ಉಳಿತಾಯವನ್ನು ನಿರೀಕ್ಷಿಸಲಾಗಿದೆ.
ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಬಜೆಟ್ ಸಭೆಯಲ್ಲಿ ಪಾಲಿಕೆಯ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್- ಜೆಡಿಎಸ್) ಅವರು ಬಜೆಟ್ ಮಂಡಿಸಿದ್ದು, ಅದರಲ್ಲಿ ಈ ಅಂಶ ವ್ಯಕ್ತವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯುಳ್ಳ ಈಗಿನ ಚುನಾಯಿತ ಮಂಡಲಿ ಅಸ್ತಿತ್ವಕ್ಕೆ ಬಂದ ನಂತರ ಮಂಡಿಸಲ್ಪಟ್ಟ ಮೊದಲನೇ ಬಜೆಟ್ ಇದಾಗಿದ್ದು, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮೀನರಸಿಂಹರಾಜು (ಜೆಡಿಎಸ್) ಅವರಿಗೆ ಬಜೆಟ್ ಮಂಡಿಸುವ ಅವಕಾಶ ಲಭಿಸಿತು. ಇದರೊಂದಿಗೆ ಪಾಲಿಕೆಯಲ್ಲಿ ಸತತವಾಗಿ 5 ನೇ ಬಾರಿಗೆ ‘ಇ-ಬಜೆಟ್’ ಮಂಡನೆಯಾದಂತಾಯಿತು. ಪೇಪರ್ ಪ್ರತಿಗಳ ಬದಲು ಲ್ಯಾಪ್‍ಟಾಪ್ ಬಳಸಿದ್ದು ವಿಶೇಷವಾಗಿತ್ತು.
ಆದಾಯಗಳ ನಿರೀಕ್ಷೆ:
2019-20 ನೇ ಆರ್ಥಿಕ ವರ್ಷದಲ್ಲಿ ರಾಜಸ್ವ ಸ್ವೀಕೃತಿಗಳಿಂದ 110 ಕೋಟಿ 77 ಲಕ್ಷ 90 ಸಾವಿರ ರೂ., ಬಂಡವಾಳ ಸ್ವೀಕೃತಿಗಳಿಂದ 65 ಕೋಟಿ 14 ಲಕ್ಷ ರೂ., ಪಾಲಿಕೆಯ ಸ್ವಂತ ಆದಾಯ ಮೂಲವಾದ ಆಸ್ತಿ ತೆರಿಗೆಯಿಂದ 28 ಕೋಟಿ ರೂ., ಆಸ್ತಿ ತೆರಿಗೆ ಮೇಲಿನ ದಂಡದಿಂದ 3 ಕೋಟಿ ರೂ., ಘನತ್ಯಾಜ್ಯ ಉಪಕರದಿಂದ 1ಕೋಟಿ 70 ಲಕ್ಷ ರೂ., ನೀರಿನ ಕಂದಾಯ-ಕೊಳಾಯಿ ಜೋಡಣಾ ಶುಲ್ಕ, ಅನಧಿಕೃತ ಕೊಳಾಯಿಗಳ ಸಕ್ರಮೀಕರಣ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಮಾರಾಟದಿಂದ ಒಟ್ಟು 11 ಕೋಟಿ 83 ಲಕ್ಷ ರೂ., ಒಳಚರಂಡಿ ಸಂಪರ್ಕ ಮತ್ತು ಶುಲ್ಕಗಳಿಂದ 2 ಕೋಟಿ 1ಲಕ್ಷ ರೂ., ಅಂಗಡಿ ಮಳಿಗೆಗಳ ಬಾಡಿಗೆಯಿಂದ 1 ಕೋಟಿ 9 ಲಕ್ಷ ರೂ., ಆಸ್ತಿ ಹಕ್ಕು ಬದಲಾವಣೆಯಿಂದ 70 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕದಿಂದ 1 ಕೋಟಿ ರೂ., ಉದ್ದಿಮೆ ಪರವಾನಗಿ ಶುಲ್ಕದಿಂದ 1 ಕೋಟಿ 50 ಲಕ್ಷ ರೂ., ಜಾಹಿರಾತು ತೆರಿಗೆಯಿಂದ 13 ಲಕ್ಷ ರೂ., ಅಧಿಬಾರ ಶುಲ್ಕದಿಂದ 50 ಲಕ್ಷ ರೂ., ರಸ್ತೆ ಕಡಿತ ಶುಲ್ಕದಿಂದ 3 ಕೋಟಿ ರೂ., ಬ್ಯಾಂಕ್ ಬಡ್ಡಿಯಿಂದ 1 ಕೋಟಿ ರೂ. ಹೀಗೆ ವಿವಿಧ ಮೂಲಗಳಿಂದ ಪಾಲಿಕೆಗೆ ಆದಾಯವನ್ನು ನಿರೀಕ್ಷಿಸಲಾಗಿದೆ.
ಅನುದಾನಗಳ ನಿರೀಕ್ಷೆ:
ಸರ್ಕಾರದ ಮೂಲಗಳಿಂದ ಈ ಸಾಲಿನಲ್ಲಿ ಎಸ್.ಎಫ್.ಸಿ. ಅನುದಾನ 16 ಕೋಟಿ ರೂ., ಎಸ್.ಎಫ್.ಸಿ. ಮುಕ್ತನಿಧಿ ಅನುದಾನ 10 ಕೋಟಿ ರೂ., ಎಸ್.ಎಫ್.ಸಿ. ವಿಶೇಷ ಅನುದಾನ 1 ಕೋಟಿ ರೂ., ಎಸ್.ಎಫ್.ಸಿ. ವಿದ್ಯುತ್ ವೆಚ್ಚ ಅನುದಾನ 27 ಕೋಟಿ 40 ಲಕ್ಷ ರೂ., ಸ್ವಚ್ಛ ಭಾರತ್ ಮಿಷನ್ ಅನುದಾನ 3 ಕೋಟಿ ರೂ., ಅಮೃತ್ ಯೋಜನೆಯಡಿ 8 ಕೋಟಿ 16 ಲಕ್ಷ ರೂ., ನಲ್ಮ್ ಯೋಜನೆ ಅನುದಾನ 66 ಲಕ್ಷ 25 ಸಾವಿರ ರೂ., 14 ನೇ ಹಣಕಾಸು ಯೋಜನೆ ಅನುದಾನ 21 ಕೋಟಿ 13 ಲಕ್ಷ ರೂ., ನಗರೋತ್ಥಾನ ಯೋಜನೆ ಅನುದಾನ 30 ಕೋಟಿ ರೂ., ಬರಪರಿಹಾರ ಅನುದಾನ 2 ಕೋಟಿ ರೂ., ಶಾಸಕರು-ಸಂಸದರು-ವಿಧಾನ ಪರಿಷತ್ ಸದಸ್ಯರ ಅನುದಾನ 65 ಲಕ್ಷ ರೂ., ಘನತ್ಯಾಜ್ಯ ವಿಲೇವಾರಿ ಎಸ್.ಎಫ್.ಸಿ. ವಿಶೇಷ ಅನುದಾನ 3 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ.
ನಿರೀಕ್ಷಿತ ವೆಚ್ಚಗಳು:
ಪಾಲಿಕೆಯ ಈ ಬಜೆಟ್‍ನಲ್ಲಿ 16 ಕೋಟಿ ರೂ.ಗಳು ಸಿಬ್ಬಂದಿ ವೇತನಕ್ಕೇ ವೆಚ್ಚವಾಗಲಿದೆ. ಹೊರಗುತ್ತಿಗೆಯ ಮಾನವ ಸಂಪನ್ಮೂಲಕ್ಕೆ 65 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 3 ಕೋಟಿ ರೂ. ಮೀಸಲಿರಿಸಲಾಗಿದೆ.
ಆಯುಷ್ಮಾನ್ ಯೋಜನೆ:
ಪಾಲಿಕೆಯ ಪೌರಕಾರ್ಮಿಕರು ಮತ್ತು ವಾಲ್ವ್‍ಮನ್‍ಗಳ ಕುಟುಂಬಕ್ಕೆ ಆರೋಗ್ಯ ವಿಮೆ ಮಾಡಿಸಲು ‘ಆಯುಷ್ಮಾನ್ ಯೋಜನೆ’ಯಡಿ 60 ಲಕ್ಷ ರೂಗಳನ್ನು ಮೀಸಲಿರಿಸಲಾಗಿದೆ.
ವಿಪತ್ತು ನಿರ್ವಹಣಾ ತಂಡ:
ಮಳೆಯಿಂದ ಆಗುವ ಸಮಸ್ಯೆ, ಬೆಂಕಿ ಅನಾಹುತ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ನೆರವು ನೀಡಲು, ಅಕ್ರಮ ಫ್ಲೆಕ್ಸ್ ಬ್ಯಾನರ್ ತೆರವು, ಫುಟ್‍ಪಾತ್ ಒತ್ತುವರಿ ತೆರವು ಮೊದಲಾದ ಕಾರ್ಯ ನಿರ್ವಹಣೆಗಾಗಿ 40 ಲಕ್ಷ ರೂ. ವೆಚ್ಚದಲ್ಲಿ ಒಂದು ಜೀಪು ಮತ್ತು ಆರು ಜನರುಳ್ಳ ಎರಡು ತಂಡ ಹೊಂದಿದ ‘ವಿಪತ್ತು ನಿರ್ವಹಣಾ ತಂಡ’ವನ್ನು ರಚಿಸಲು ಉದ್ದೇಶಿಸಲಾಗಿದೆ. ಈ ವಾಹನಕ್ಕೆ `ಧನುಷ್’ ಎಂದು ಹೆಸರಿಸಲಾಗುವುದು.
ವಾರ್ಡ್ ಸಮಿತಿ ರಚನೆ:
ನಗರದ ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವಕ್ಕಾಗಿ ವಾರ್ಡ್ ಸಮಿತಿಗಳನ್ನು ರಚಿಸಲು ತೀರ್ಮಾನಿಸಿದ್ದು, ಈ ಉದ್ದೇಶಕ್ಕಾಗಿ 10 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ.
ಮೇಯರ್ ವಿವೇಚನಾ ನಿಧಿ:
ಮೇಯರ್ ಅವರ ವಿವೇಚನಾ ಅನುದಾನವಾಗಿ ವಾರ್ಡ್‍ಗಳಲ್ಲಿ ಅತಿತುರ್ತಾಗಿ ಕೈಗೊಳ್ಳುವ ಕಾಮಗಾರಿಗಾಗಿ 2 ಕೋಟಿ ರೂ.ಗಳನ್ನುಬಜೆಟ್‍ನಲ್ಲಿ ಕಾಯ್ದಿರಿಸಲಾಗಿದೆ.
ತುಮಕೂರು ನಗರದ ನೈರ್ಮಲ್ಯದ ರಕ್ಷಣೆಗಾಗಿ ವೈಜ್ಞಾನಿಕ ಕಸವಿಲೇವಾರಿ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು 35 ಕೋಟಿ 34 ಲಕ್ಷ ರೂಗಳನ್ನು ತೆಗೆದಿರಿಸಲಾಗಿದೆ. ನಗರದ ಕುಡಿಯುವ ನೀರಿನ ಸ್ಥಾವರಗಳ ನಿರ್ವಹಣೆ, ದುರಸ್ತಿಗೆ, ನೀರು ಸರಬರಾಜು ನಿರ್ವಹಣೆ, ಕೊಳವೆ ಬಾವಿ ಕೊರೆಸುವುದು, ನೀರು ಪೂರೈಕೆ ಸಾಮಗ್ರಿ ಖರೀದಿ, ಹೊರಗುತ್ತಿಗೆ ಸಿಬ್ಬಂದಿ ವೇತನ ಸೇರಿದಂತೆ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ 51 ಕೋಟಿ 1 ಲಕ್ಷ 50 ಸಾವಿರ ರೂ.ಗಳನ್ನು ಕಾಯ್ದಿರಿಸಲಾಗಿದೆ.
ನಗರದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗುತ್ತಿಗೆದಾರರಿಗೆ ವಹಿಸಿದಲ್ಲಿ ಪಾಲಿಕೆಗೆ 65 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಹೊಸ ಘಟಕಗಳನ್ನು ಸ್ಥಾಪಿಸಲು 1 ಕೋಟಿ 20 ಲಕ್ಷ ರೂಗಳನ್ನು ಮೀಸಲಿರಿಸಲಾಗಿದೆ.
ಬೀದಿ ದೀಪ ನಿರ್ವಹಣೆ:
ಸಾರ್ವಜನಿಕ ಬೀದಿದೀಪದ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 14 ಕೋಟಿ 62 ಲಕ್ಷ ರೂಗಳನ್ನು ತೆಗೆದಿರಿಸಲಾಗಿದೆ. ಹಿಂದ