ನವದೆಹಲಿ:
ವಿಶ್ವದ ಅತಿ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣದಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನ ಎರಡನೇ ಸ್ಥಾನ ಪಡೆದುಕೊಂಡಿದೆ.ಕರೊನಾ ಬರುವ ಮುನ್ನಾ 23ನೇ ಸ್ಥಾನದಲ್ಲಿದ್ದ ಈ ವಿಮಾನ ನಿಲ್ದಾಣ ಇದೀಗ ಎರಡು ವರ್ಷಗಳಲ್ಲೇ ಅತಿ ಹೆಚ್ಚು ಜನರು ಬಳಸುವ ವಿಶ್ವದ ಎರಡನೇ ವಿಮಾನ ನಿಲ್ದಾಣ ಎಂದೆನಿಸಿಕೊಂಡಿದೆ ಎಂದು ಅಫೀಶಿಯಲ್ ಏರ್ಲೈನ್ ಗೈಡ್ (ಒಎಜಿ) ತಿಳಿಸಿದೆ.
ಕೆಜಿಎಫ್ ಚಾಪ್ಟರ್ 2 ದಾಖಲೆ: ಅತೀ ಹೆಚ್ಚು ಗಳಿಕೆ ಕಂಡ ಭಾರತದ ಟಾಪ್ 10 ಸಿನಿಮಾ ಇವು
ಇನ್ನು ಅಮೆರಿಕದ ಅಟ್ಲಾಂಟ ಮೊದಲ ಸ್ಥಾನದಲ್ಲಿದ್ದರೆ, ದುಬೈ ವಿಮಾನ ನಿಲ್ದಾಣ ಎರಡನೇ ಸ್ಥಾನ ಪಡೆದುಕೊಂಡಿದೆ. 2019ರಲ್ಲಿ ದಿಲ್ಲಿ ವಿಮಾನ ನಿಲ್ದಾಣ 23ನೇ ಸ್ಥಾನದಲ್ಲಿತ್ತು.ಅಟ್ಲಾಂಟ, ದುಬೈ ಹಾಗೂ ನವದೆಹಲಿ ವಿಮಾನ ನಿಲ್ದಾಣದಲ್ಲಿ ಈ ವರ್ಷ ಕ್ರಮೇಣವಾಗಿ ವಿಮಾನ ನಿಲ್ದಾಣದಲ್ಲಿ 4.42 ಮಿಲಿಯನ್, 3.61 ಹಾಗೂ 3.55 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವರದಿಯಾಗಿದೆ.
ಕೋವಿಡ್-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,568 ಹೊಸ ಕೇಸ್ ಪತ್ತೆ, 20 ಮಂದಿ ಸಾವು
ಕೊವಿಡ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ಪರಿಣಾಮ ಬೀರಿತ್ತು, ಕರೊನಾ ಸಡಿಲಿಕೆ ನಂತರ ಅತಿ ಹೆಚ್ಚು ಪ್ರಯಾಣಿಕರು ವಿಮಾನ ಪ್ರಯಾಣ ಕೈಗೊಂಡಿದ್ದಾರೆ ಎಂದು ದಿಲ್ಲಿ ವಿಮಾನ ನಿಲ್ದಾಣದಲ ಸಿಇಒ ವಿದೆಹ್ ಕುಮಾರ್ ಜೈಪುರಿಯರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
